ಬೆಂಗಳೂರು: ಸಂಜೆ ನಾಲ್ಕು ಗಂಟೆ ಬಳಿಕ ಮತದಾನ ಪ್ರಮಾಣ ಹೆಚ್ಚಾಗಲಿದೆ ಎಂದು ಆರ್.ಆರ್. ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.
ಈವರೆಗೆ ಶೇ.20ರಷ್ಟು ಮತದಾನ.. ಹೆಚ್ಚಿನ ಮತದಾನ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಮುನಿರತ್ನ - By-election
ಆರ್.ಆರ್. ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಎಲ್ಲಾ ಮತಕೇಂದ್ರಗಳಿಗೆ ಭೇಟಿ ನೀಡಿ, ಮತದಾನ ಆಗಿರುವ ಬಗ್ಗೆ ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈವರೆಗೆ 20ರಷ್ಟು ವೋಟಿಂಗ್ ಆಗಿದೆ ಎಂಬುದು ತಿಳಿದಿದೆ.
![ಈವರೆಗೆ ಶೇ.20ರಷ್ಟು ಮತದಾನ.. ಹೆಚ್ಚಿನ ಮತದಾನ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಮುನಿರತ್ನ Munirth visits St Claret School in Jhalahalli](https://etvbharatimages.akamaized.net/etvbharat/prod-images/768-512-9412462-thumbnail-3x2-net.jpg)
ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ
ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯಲ್ಲಿನ ಮತ ಕೇಂದ್ರಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಭೇಟಿ..
ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಮತಗಟ್ಟೆಯ ಎಲ್ಲಾ ಮತಕೇಂದ್ರಗಳಿಗೆ ಭೇಟಿ ನೀಡಿದ ಅವರು, ಮತದಾನ ಆಗಿರುವ ಬಗ್ಗೆ ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿ, ಒಟ್ಟಾರೆಯಾಗಿ ಇಷ್ಟು ಹೊತ್ತಿಗೆ 30% ಮತದಾನ ಆಗಬೇಕಿತ್ತು. ಈ ಬಾರಿ ಈವರೆಗೆ 20% ಮತದಾನ ಆಗಿದೆ. ನಿಧಾನವಾಗಿಯಾದರೂ ಬಳಿಕ ಉತ್ತಮ ಮತದಾನ ಆಗಲಿದೆ. ಇದು ಉಪಚುನಾವಣೆ ಹಾಗಾಗಿ ಸ್ವಲ್ಪ ಕಡಿಮೆ ಸಂಖ್ಯೆಯಲ್ಲಿ ಮತದಾರರು ಬರುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಸಂಜೆ 4 ಗಂಟೆ ಮೇಲೆ ಮತದಾನ ಹೆಚ್ಚಾಗುತ್ತದೆ. ಬೆಂಗಳೂರಲ್ಲಿ ಈಗ ಕೋವಿಡ್ ಸೋಂಕು ಕಡಿಮೆ ಆಗಿದೆ ಎಂದರು.