ಬೆಂಗಳೂರು: ನನ್ನ ವಿರುದ್ಧದ ಎಲ್ಲ ಆರೋಪಗಳಿಗೂ ಚುನಾವಣಾ ಆಯೋಗ ಅನುಮತಿ ನೀಡುತ್ತಿದ್ದಂತೆ ಸ್ಪಷ್ಟೀಕರಣ ಕೊಡುವೆ. ತಿರುಪತಿಯಲ್ಲ, ಯಾವುದೇ ದೇವಾಲಯಕ್ಕೂ ಬೇಕಾದರೂ ಬರಲು ಸಿದ್ಧನಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
ನನ್ನ ವಿರುದ್ಧದ ಎಲ್ಲ ಆರೋಪಗಳಿಗೂ ಸ್ಪಷ್ಟೀಕರಣ ನೀಡುತ್ತೇನೆ: ಮುನಿರತ್ನ - BJP candidate Muniratna reaction
ನನ್ನ ವಿರುದ್ಧದ ಎಲ್ಲ ಆರೋಪಗಳಿಗೂ ಚುನಾವಣಾ ಆಯೋಗ ಅನುಮತಿ ನೀಡುತ್ತಿದ್ದಂತೆ ಸ್ಪಷ್ಟೀಕರಣ ಕೊಡುತ್ತೇನೆ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ. ಚುನಾವಣಾಧಿಕಾರಿಗಳನ್ನು ನಾನು ಭೇಟಿ ಮಾಡಿ ಯಾವಾಗ ಮಾತನಾಡಬಹುದು ಎಂದು ಕೇಳುತ್ತೇನೆ. ಒಂದು ಸೂಕ್ತ ವೇದಿಕೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ.

ವೈಯಾಲಿಕಾವಲ್ ನಿವಾಸದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಮಾಡಿದ ಆರೋಪ ಕುರಿತು ಉತ್ತರಿಸುತ್ತೇನೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಲು ನಾನು ಸಿದ್ಧವಾಗಿದ್ದೇನೆ. ಇಂದು ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾತನಾಡುವುದಿಲ್ಲ. ತಿರುಪತಿಗೆ ಅಲ್ಲ, ಯಾರು ಯಾರು ಯಾವ ದೇವರನ್ನು ನಂಬುತ್ತಾರೆ ಎಲ್ಲ ದೇವಾಲಯಗಳಿಗೂ ನಾನು ಬರುಲ ಸಿದ್ಧನಿದ್ದೇನೆ ಎಂದರು.
ಭಿಕ್ಷುಕರಿಗೂ ರಾಜಕಾರಣಿಗಳಿಗೂ ವ್ಯತ್ಯಾಸ ಇಲ್ಲ: ಭಿಕ್ಷುಕನಿಗೆ ರಾಜಕಾರಣಿಗೂ ಅಂತಹ ವ್ಯತ್ಯಾಸ ಏನು ಇಲ್ಲ. ಭಿಕ್ಷುಕ ಅಮ್ಮಾ ತಾಯಿ ಭಿಕ್ಷೆ ಎನ್ನುತ್ತಾನೆ, ನಾವು ಅಮ್ಮ ತಾಯಿ ಮತ ನೀಡಿ ಎನ್ನುತ್ತೇವೆ. ಇದರಲ್ಲಿ ಏನು ವ್ಯತ್ಯಾಸವಿದೆ. ಬಂಡೆ, ಛಿದ್ರ ಎನ್ನುವುದು ಎಲ್ಲಿಂದ ಬಂತು, ತೊಡೆ ತಟ್ಟುವುದು ಎಲ್ಲಿಂದ ಬರುತ್ತದೆ. ನಾವು ಭಿಕ್ಷುಕರಾಗಿರುತ್ತೇವೆ. ಭಿಕ್ಷೆ ಕೊಡುವವರು ಕೊಟ್ಟರೆ ತೆಗೆದುಕೊಳ್ಳುತ್ತೇವೆ ಹಾಕದಿದ್ದರೆ ಇನ್ನೊಂದು ಮನೆಗೆ ಹೋಗುತ್ತೇವೆ ಅಷ್ಟೇ ಎಂದರು.