ಕರ್ನಾಟಕ

karnataka

ETV Bharat / state

ಆಹಾರ ಸಾಮಾಗ್ರಿ ಕಿಟ್​ಗಳಲ್ಲೂ ಬಿಜೆಪಿ ಪ್ರಚಾರ: ಶಾಸಕ ರಾಮಲಿಂಗಾರೆಡ್ಡಿ ಆರೋಪ - ಶಾಸಕ ರಾಮಲಿಂಗ ರೆಡ್ಡಿ ಆರೋಪ

ಕೊರೊನಾ ಸೋಂಕು ದೇಶದೆಲ್ಲೆಡೆ ವ್ಯಾಪಿಸಿ ಜನತೆ ತತ್ತರಗೊಂಡಿದ್ದಾರೆ. ಸರ್ಕಾರ ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಆಹಾರ ಸಾಮಾಗ್ರಿ ಕಿಟ್​ಗಳ ಮೇಲೆ ಬಿಜೆಪಿ ಪಕ್ಷದ ಮುಖಂಡರ ಫೋಟೋ ಹಾಕುವ ಮೂಲಕ ಪ್ರಚಾರ ಮಾಡುತ್ತಿದೆ ಎಂದು ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದರು.

BJP campaigns in food kits said by Ramalinga Reddy
ಶಾಸಕ ರಾಮಲಿಂಗ ರೆಡ್ಡಿ ಆರೋಪ

By

Published : Apr 15, 2020, 8:44 PM IST

ಮಹದೇವಪುರ:ಬಡವರಿಗೆ ವಿತರಿಸುವ ಸರ್ಕಾರಿ ಕಿಟ್​ಗಳನ್ನ ಬಿಜೆಪಿ ನಾಯಕರು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಕೊರೊನಾ ಸೋಂಕು ದೇಶದೆಲ್ಲೆಡೆ ವ್ಯಾಪಿಸಿ ಜನತೆ ತತ್ತರಗೊಂಡಿದ್ದಾರೆ. ಸರ್ಕಾರ ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಆಹಾರ ಸಾಮಾಗ್ರಿ ಕಿಟ್​ಗಳ ಮೇಲೆ ಬಿಜೆಪಿ ಪಕ್ಷದ ಮುಖಂಡರ ಫೋಟೋ ಹಾಕುವ ಮೂಲಕ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.

ಆಹಾರ ಸಾಮಾಗ್ರಿ ಕಿಟ್​ಗಳಲ್ಲೂ ಬಿಜೆಪಿ ಪ್ರಚಾರ
ಮಹದೇವಪುರ ಕ್ಷೇತ್ರದ ವರ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹತ್ತು ಸಾವಿರ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ವಿಶ್ವವೇ ಕೊರೊನಾ ಎಂಬ ವೈರಸ್​ಗೆ ಸಿಲುಕಿ ಸಮಸ್ಯೆಗೆ ಒಳಗಾಗಿದೆ. ಆದ್ರೆ ಇಂತಹ ಸಂದರ್ಭದಲ್ಲೂ ಬಿಜೆಪಿ ಸರ್ಕಾರ ಪಕ್ಷ ಭೇದ ಮಾಡುತ್ತಿದೆ ಎಂದು ದೂರಿದರು. ನಂತರ ಮಾತನಾಡಿದ ಪಾಲಿಕೆ ಸದಸ್ಯ ಉದಯ್ ಕುಮಾರ್, ವರ್ತೂರು ಬ್ಲಾಕ್ ವತಿಯಿಂದ ಐದು ವಾರ್ಡ್, 2 ಗ್ರಾಮ ಪಂಚಾಯತಿ ವ್ಯಾಪ್ತಿಯ 10 ಸಾವಿರ ಬಡವರು ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಆಹಾರ ಪದಾರ್ಥ ವಿತರಿಸಲಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರು, ನಿರ್ಗತಿಕರು ಸೇರಿದಂತೆ ಅನೇಕ ಬಡವರಿಗೆ ಸಹಾಯವಾಗಲಿದೆ ಎಂದರು.

ABOUT THE AUTHOR

...view details