ಕರ್ನಾಟಕ

karnataka

ETV Bharat / state

ಬೂತ್​ ವಿಜಯ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ: ಕೋಟಾ ಶ್ರೀನಿವಾಸ ಪೂಜಾರಿ ವಿಶ್ವಾಸ - 32 ಲಕ್ಷ ಮನೆಗಳಲ್ಲಿ ಬಿಜೆಪಿ ಬಾವುಟ

ಬೂತ್​ ವಿಜಯ ಅಭಿಯಾನ ಯಶಸ್ವಿ- 32 ಲಕ್ಷ ಮನೆಗಳಲ್ಲಿ ಬಿಜೆಪಿ ಬಾವುಟ - ಪಕ್ಷ ಸಂಘಟನೆ ದೃಷ್ಟಿಯಿಂದ ಮಹತ್ವ ಕಾರ್ಯ

ಬೂತ್​ ವಿಜಯ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ : ಕೋಟಾ ಶ್ರೀನಿವಾಸ ಪೂಜಾರಿ ವಿಶ್ವಾಸ
bjp-booth-vijaya-will-get-success-kota-shrinivas-poojari

By

Published : Jan 14, 2023, 3:44 PM IST

ಬೆಂಗಳೂರು: ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವುದಕ್ಕಾಗಿ ಪ್ರಾರಂಭಿಸಿರುವ 'ಬೂತ್ ವಿಜಯ' ಅಭಿಯಾನಕ್ಕೆ ರಾಜ್ಯದ ಜನತೆ ಅಭೂತ ಪೂರ್ವ ಸ್ಪಂದನೆ ನೀಡುತ್ತಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವನ್ನು ರಾಜ್ಯದಲ್ಲಿ ಮತ್ತಷ್ಟು ಬಲಪಡಿಸಲು ಪ್ರಾರಂಭಿಸಿರುವ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಮುಖ್ಯ ಮತ್ರಿಗಳು ಚಾಲನೆ ನೀಡಿದ್ದು, ಇದೀಗ ಕಾರ್ಯಕ್ರಮ ಶಸ್ವಿಯಾಗುತ್ತಿದೆ ಎಂದು ವಿವರಿಸಿದರು. ರಾಜ್ಯದಲ್ಲಿ 13,21,792 ಪೇಜ್ ಪ್ರಮುಖರ ನೇಮಕ ಮಾಡಲಾಗಿದೆ. 50,260 ವಾಟ್ಸ್​ಆ್ಯಪ್​ ಗ್ರೂಪ್ ರಚಿಸಲಾಗಿದೆ. 15,93,848 ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.

32,00,883 ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಲಾಗುತ್ತಿದೆ. ಪಕ್ಷದ ಎಲ್ಲ ಶಾಸಕರು, ಸಂಸದರು ಇದಕ್ಕೆ ಸಹಕಾರ ನೀಡಿದ್ದಾರೆ. ಶಾಸಕರು ಇಲ್ಲದ ಭಾಗಗಳಿಗೆ ಇತರ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಈ ಬೂತ್ ವಿಜಯ ಅಭಿಯಾನ ಸಂಚಲನ ಮೂಡಿಸಿದೆ. ಬೂತ್ ಮಟ್ಟದಲ್ಲಿ ಜನರನ್ನೆ ಸೆಳೆಯವ ಮೂಲಕ ರಾಜ್ಯವನ್ನು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತ ಪಡಿಸಿದರು.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಭಿಯಾನ ಹಮ್ಮಿಕೊಂಡಿದ್ದ ಪಕ್ಷ ಸಂಘಟನೆ ದೃಷ್ಟಿಯಲ್ಲಿ ಮಹತ್ವದ ಕಾರ್ಯಕ್ರಮವಾಗಿದೆ. ಈ ಅಭಿಯಾನದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ರಾಜ್ಯದ ಜನತೆಗೆ ತಲುಪಿಸುತ್ತೇವೆ. ಆ ಮೂಲಕ ಜನರ ವಿಶ್ವಾಸವನ್ನು ನಾವು ಗಳಿಸುತ್ತೇವೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ಪಕ್ಷದ ಕಾರ್ಯಕರ್ತರಾದ ನಾವು ನಾವು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಉತ್ತರ ಪ್ರದೇಶ, ಗೋವಾ, ಗುಜರಾತ್‌ಲ್ಲಿ ಇದೇ ರೀತಿಯ ಅಭಿಯಾನದ ಮೂಲಕ ಯಶಸ್ವಿಯಾಗಿದ್ದೆವು. ಬೂತ್ ಮಟ್ಟದಲ್ಲಿ ಪೇಜ್ ಪ್ರಮುಖ್ ರನ್ನ ನೇಮಿಸಿದ್ದೆವು. ಆ ಮೂಲಕ ಪಕ್ಷ ಸಂಘಟನೆ ಮಾಡ್ತಿದ್ದೇವೆ ಎಂದು ಹೇಳಿದರು.

ಜೊತೆಗೆ, ಕಾರ್ಯಕರ್ತರ ನಡುವೆ ಹಲವು ಸಭೆಗಳನ್ನು ಮಾಡಿದ್ದು, ಎಲ್ಲರನ್ನು ಅಭಿಯಾನದಲ್ಲಿ ಭಾಗಿಯಾಗುವಂತೆ ಮಾಡಿದ್ದೇವೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ್ದೇವೆ. ಅಭಿಯಾನದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೇ 15,93,484 ಕಾರ್ಯಕರ್ತರು ಕೆಲಸ ಮಾಡ್ತಿದ್ದಾರೆ. ಚುನಾವಣೆ ದೃಷ್ಟಿಯಿಂದ ಯಾತ್ರೆ, ಸಮಾವೇಶಗಳನ್ನೂ ಮಾಡಲಾಗುವುದು. ಬಿಜೆಪಿ ಅಭಿಯಾನ ಜನತೆಯ ಮನೆ ಮಾತ್ರ ಮುಟ್ಟವುದಲ್ಲ ಮನಸ್ಸನ್ನೂ ಮುಟ್ಟಲಿದೆ ಎಂದು ವಿವರಿಸಿದರು.

ಯತ್ನಾಳ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಹಿಂದೇಟು:ಬೃಹತ್ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಮಹೇಶ್ ಟೆಂಗಿನಕಾಯಿ ಹಿಂದೇಟು ಹಾಕಿದರು. ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ಕಾದು ನೋಡಿ ಎಂದಷ್ಟೇ ಪ್ರತಿಕ್ರಿಯಿಸಿದರು.

ಜನಾಭಿಪ್ರಾಯದಿಂದ ಅಧಿಕಾರ:ಬಿಜೆಪಿ ಪಕ್ಷ ಜನಾಭಿಪ್ರಾಯದಿಂದ ಅಧಿಕಾರಕ್ಕೆ ಬರುವುದಿಲ್ಲ ಎಂಬುದಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಮಹೇಶ್ ಟೆಂಗಿನಕಾಯಿ, ನಾವು 150 ಮಿಷನ್ ಇಟ್ಟುಕೊಂಡಿದ್ದೇವೆ. ಜನಾಭಿಪ್ರಾಯದ ಮೂಲಕವೇ ಅಧಿಕಾರಕ್ಕೆ ಬರಲಿದ್ದೇವೆ ಎಂದು ಭರವಸೆ ವ್ಯಕ್ತ ಪಡಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾರ್ಕಿಂಗ್ ಅವ್ಯವಸ್ಥೆ: ಸಂಚಾರಿ ಆಯುಕ್ತರಿಗೆ ಪತ್ರ ರವಾನಿಸಿದ ಟೆಕ್ಕಿ

ABOUT THE AUTHOR

...view details