ಬೆಂಗಳೂರು :ಚಿತ್ರನಟ ಜಗ್ಗೇಶ್ ಸೇರಿದಂತೆ 10 ಮಂದಿ ಮುಖಂಡರನ್ನು ರಾಜ್ಯ ವಕ್ತಾರರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
ರಾಜ್ಯ ವಕ್ತಾರರಾಗಿದ್ದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಮುಖ್ಯ ವಕ್ತಾರರನ್ನಾಗಿ ನೇಮಿಸಿ, ನಟ ಜಗ್ಗೇಶ್, ಶಾಸಕರಾದ ರಾಜುಗೌಡ, ಪಿ ರಾಜೀವ್, ರಾಜಕುಮಾರ್ ಪಾಟೀಲ್ ತೆಲ್ಕೂರ್,ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿಗೌಡ, ಗಿರಿಧರ ಉಪಾಧ್ಯಾಯ, ಎಂ ಬಿ ಜಿರಲಿ ಹಾಗೂ ಮಹೇಶ್ ಅವರನ್ನು ರಾಜ್ಯ ವಕ್ತಾರರನ್ನಾಗಿ 2023ರವರೆಗೆ ನೇಮಕ ಮಾಡಲಾಗಿದೆ.