ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಡಾ. ಕೆ ಸುಧಾಕರ್ ಅವರು ಎಸ್‌ಎಂ ಕೃಷ್ಣ ಅವರ ಭೇಟಿ ಸಂಬಂಧ ಖುದ್ದು ಹೇಳಿಕೆ ನೀಡಿದ್ದಾರೆ. ಆ ಭೇಟಿ ಕಾಕತಾಳೀಯವಷ್ಟೇ ಅಂತಾ ಡಿಸಿಎಂ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಇಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಎಸ್‌ಎಂ ಕೃಷ್ಣ ಭೇಟಿ ವೇಳೆ ಬಿಜೆಪಿ ನಾಯಕರು ಕಾಕತಾಳೀಯವಾಗಿ ಆಗಮಿಸಿದ್ದಾರೆಯೇ ಹೊರತು ಇನ್ನಾವ ಉದ್ದೇಶವೂ ಇಲ್ಲ ಎಂದು ಅವರೇ ಸ್ಪಷ್ಟ ಪಡಿಸಿದ್ದಾರೆ. ರಮೇಶ್ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ಭರವಸೆ ಇದೆ. ಅವರ ಹೇಳಿಕೆ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.