ಕರ್ನಾಟಕ

karnataka

ETV Bharat / state

ಕೆ.ಆರ್.​ಪುರಂನಲ್ಲಿ ನಂದೀಶ್​​ ರೆಡ್ಡಿಗೆ ಬಿಜೆಪಿಯಿಂದ ಟಿಕೆಟ್​​​ ನೀಡಲು ಒತ್ತಾಯ - ಬಿಜೆಪಿ

ನಂದೀಶ್​ ರೆಡ್ಡಿ ಅವರಿಂದ ಕೆ.ಆರ್.​ಪುರಂನಲ್ಲಿ ಬಿಜೆಪಿ ಉಳಿದಿದೆ. ಕಳೆದ ಐದು ವರ್ಷಗಳಲ್ಲಿ ಕೆ.ಆರ್​.ಪುರಂನಲ್ಲಿ ಅವರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಯಾರೂ ಮಾಡಿಲ್ಲ. ಇಂತಹವರನ್ನು ಬಿಜೆಪಿ ನಾಯಕರು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಕೆ.ಆರ್​.ಪುರಂನಲ್ಲಿ ಬಿಜೆಪಿ ಪಕ್ಷ ಉಳಿಯುವುದಿಲ್ಲ. ಹಾಗಾಗಿ ಕೆ.ಆರ್​.ಪುರಂನಲ್ಲಿ ನಂದೀಶ್ ರೆಡ್ಡಿಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

BJP Activists

By

Published : Sep 26, 2019, 1:32 AM IST

ಬೆಂಗಳೂರು: ಕೆ.ಆರ್.​ಪುರಂನಲ್ಲಿ ನಂದೀಶ್ ರೆಡ್ಡಿಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ನಂದೀಶ್ ರೆಡ್ಡಿಗೆ ಬಿಜೆಪಿಯಿಂದ ಟಿಕೆಟ್​ ನೀಡುವಂತೆ ಕಾರ್ಯಕರ್ತರ ಒತ್ತಾಯ

ನಗರದಲ್ಲಿರುವ ಕಚೇರಿಗೆ ಆಗಮಿಸಿದ್ದ ಕಾರ್ಯಕರ್ತರು ಬಿಜೆಪಿ ಸರ್ಕಾರ, ಮೋದಿ ಪರವಾಗಿ ಘೋಷಣೆ ಕೂಗಿದರು. ಬಳಿಕ ನಂದೀಶ್​ ರೆಡ್ಡಿ ಅವರಿಂದ ಕೆ.ಆರ್.​ಪುರಂನಲ್ಲಿ ಬಿಜೆಪಿ ಉಳಿದಿದೆ. ಕಳೆದ ಐದು ವರ್ಷಗಳಲ್ಲಿ ಕೆ.ಆರ್.​ಪುರಂನಲ್ಲಿ ಅವರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಯಾರೂ ಮಾಡಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು 15 ಸಾವಿರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇಂತಹವರನ್ನು ಬಿಜೆಪಿ ನಾಯಕರು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಕೆ.ಆರ್​.ಪುರಂನಲ್ಲಿ ಬಿಜೆಪಿ ಪಕ್ಷ ಉಳಿಯುವುದಿಲ್ಲ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಅಭ್ಯರ್ಥಿ ನಂದೀಶ್ ರೆಡ್ಡಿಯಾವರೇ ಆಗಬೇಕು. ಎರಡು ದಶಕಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು, ನಿಷ್ಠಾವಂತ ನಾಯಕ. ಹಾಗಾಗಿ ಯಾವುದೇ ಕಾರಣಕ್ಕೂ ವಲಸೆ ಬಂದಿರುವ ಬೈರತಿಗೆ ಟಿಕೆಟ್ ನೀಡಬಾರದು. ಅನರ್ಹ ಶಾಸಕ ಬೈರತಿಗೆ ಟಿಕೆಟ್ ಕೊಡಬಾರದು. ಬೈರತಿ ಬಸವರಾಜ್ ಇನ್ನೂ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಆಗಲೇ ಅವರ ವರ್ತನೆ ಬೇರೆ ರೀತಿ ಇದೆ. ಮೂಲ ಬಿಜೆಪಿಯವರನ್ನು ಅವರು ಕಡೆಗಣಿಸುತ್ತಾರೆ. ನಾವು ಅವರ ಪರ ಮತ ಕೇಳುವುದಿಲ್ಲ. ನಾವು ಬಸವರಾಜ್ ಅವರಿಗೆ ಮತ ಹಾಕುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಸಿದರು.

ABOUT THE AUTHOR

...view details