ಕರ್ನಾಟಕ

karnataka

ETV Bharat / state

ಬಚ್ಚೇಗೌಡರ ಕಡೆಗಣನೆ ಆರೋಪ: ಪ್ರತಿಭಟನೆ ನಿಯಂತ್ರಿಸಲು ಲಘು ಲಾಠಿ ಪ್ರಹಾರ - protest

ಪೊಲೀಸರು ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಸಂಧಾನಕ್ಕೆ ಯತ್ನಿಸಿದ್ರು ಸಫಲವಾಗಲಿಲ್ಲ. ಪರಿಸ್ಥಿತಿ ಅರಿತ ಪೊಲೀಸರು ಬಿಜೆಪಿ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದು, ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಸೇರಿ ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ಬಚ್ಚೇಗೌಡರ ಕಡೆಗಣನೆ ಆರೋಪ

By

Published : Jun 15, 2019, 1:53 PM IST

ಬೆಂಗಳೂರು: ಹೊಸಕೋಟೆಯ ಬಿಎಂಟಿಸಿ ಬಸ್ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಬಿ.ಎನ್. ಬಚ್ಚೇಗೌಡರನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬಚ್ಚೇಗೌಡರ ಕಡೆಗಣನೆ ಆರೋಪ

ಆಹ್ವಾನ ಪತ್ರಿಕೆಯಲ್ಲಿ ಕಾಟಾಚಾರಕ್ಕೆ ಬಚ್ಚೇಗೌಡರ ಹೆಸರು ಮುದ್ರಿಸಿ, ಆಹ್ವಾನ ನೀಡದ ಹಿನ್ನೆಲೆ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಸಚಿವ ಎಂಬಿಟಿ ನಾಗರಾಜು ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ ಅಂತಾ ಇದೇ ವೇಳೆ ಪ್ರತಿಭಟನಾಕಾರರು ಆರೋಪ ಮಾಡಿದರು.

ಇನ್ನು, ಪೊಲೀಸರು ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಸಂಧಾನಕ್ಕೆ ಯತ್ನಿಸಿದ್ರು ಸಫಲವಾಗಲಿಲ್ಲ. ಪರಿಸ್ಥಿತಿ ಅರಿತ ಪೊಲೀಸರು ಬಿಜೆಪಿ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದು, ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಸೇರಿ ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ಬಚ್ಚೇಗೌಡರ ಕಡೆಗಣನೆ ಆರೋಪ

ಗದ್ದಲದ ಮಧ್ಯೆಯೇ ಕಾಂಗ್ರೆಸ್ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿದ್ದ ಚೇರುಗಳನ್ನು ಜೋಡಿಸಿ ಕಾರ್ಯಕ್ರಮ ನಡೆಸಲು ಮುಂದಾದ್ರು. ಕಾರ್ಯಕ್ರಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

For All Latest Updates

TAGGED:

protest

ABOUT THE AUTHOR

...view details