ಕರ್ನಾಟಕ

karnataka

ETV Bharat / state

ಬಿಟ್‌ಕಾಯಿನ್‌ ಹೂಡಿಕೆಗೆ ಹೋಗಿ ಕೋಟಿಗಟ್ಟಲೇ ಹಣ ಕಳೆದುಕೊಂಡ ಉದ್ಯಮಿ: ಸೈಬರ್ ಠಾಣೆಯಲ್ಲಿ ದೂರು ದಾಖಲು - ಕ್ರಿಪ್ಟೋ ಕರೆನ್ಸಿ ವ್ಯವಹಾರ

ಸಿಲಿಕಾನ್​ ಸಿಟಿಯಲ್ಲಿ ಉದ್ಯಮಿಯೊರ್ವರು ಕ್ರಿಪ್ಟೋಕರೆನ್ಸಿ ವ್ಯವಹಾರಕ್ಕೆ ಕೈ ಹಾಕಿ ಬರೋಬ್ಬರಿ ಮೂರೂವರೆ ಕೋಟಿ ರೂ. ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ದಕ್ಷಿಣ ವಿಭಾಗದ ಸಿಇಎನ್ ಅಪರಾಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಬಿಟ್‌ಕಾಯಿನ್‌ ಹೂಡಿಕೆ ವ್ಯವಹಾರ
Bitcoin business frude case

By

Published : Jul 3, 2021, 11:14 PM IST

ಬೆಂಗಳೂರು:ಉದ್ಯಮಿಯೊರ್ವರು ಕ್ರಿಪ್ಟೋಕರೆನ್ಸಿ ವ್ಯವಹಾರಕ್ಕೆ ಕೈ ಹಾಕಿ ಬರೋಬ್ಬರಿ ಮೂರೂವರೆ ಕೋಟಿ ರೂ. ಪಂಗನಾಮ ಹಾಕಿಸಿಕೊಂಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಜೆಪಿ ನಗರದ ಗೌತಮ್ ಹಣ ಕಳೆದುಕೊಂಡಿರುವ ಉದ್ಯಮಿ. ಇವರ ಸ್ನೇಹಿತ ರಮೇಶ್​ ಎಂಬುವವರು ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಲಾಭ ಗಳಿಸಿದ್ದರು. ಇದರಿಂದ ಆಸಕ್ತರಾದ ಗೌತಮ್​ ಸ್ನೇಹಿತ ರಮೇಶ್ ಮೂಲಕ ಕ್ರಿಪ್ಟೋಕರೆನ್ಸಿ ವ್ಯವಹಾರಕ್ಕೆ ಕೈ ಹಾಕಿದ್ದರು.

ಈ ವ್ಯವಹಾರದ ಬಗ್ಗೆ ತಮಗೆ ತಿಳುವಳಿಕೆ ಇಲ್ಲ. ಸ್ನೇಹಿತ ಕುನಾಲ್ ಎಂಬಾತನ ಮೂಲಕ ಹೂಡಿಕೆ ಮಾಡಲಾಗಿದೆ ಎಂದು ಸ್ನೇಹಿತ ರಮೇಶ್ ಹೇಳಿದ್ದರು. ರಮೇಶ್ ಸಂಪರ್ಕದಿಂದ ಕುನಾಲ್ ಭೇಟಿ ಮಾಡಿ ಅವರ ಸಲಹೆಯಂತೆ ಕಳೆದ ಮೇ 15ರಂದು ಕ್ರಿಪ್ಟೋ ಕರೆನ್ಸಿಗಳನ್ನು ಖರೀದಿಸಲು ಎರಡು ಬ್ಯಾಂಕ್ ಖಾತೆಗಳಿಗೆ ಒಟ್ಟು 3.5 ಕೋಟಿ ರೂ. ವರ್ಗಾವಣೆ ಮಾಡಿದ್ದು, ಕ್ರಿಪ್ಟೋ ಕರೆನ್ಸಿಯಾಗಲಿ, ತಾನು ಕೊಟ್ಟ ಹಣವನ್ನಾಗಲಿ ವಾಪಸ್ಸು ಕೊಟ್ಟಿಲ್ಲ.

ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ಕಂಗಾಲಾದ ಗೌತಮ್ ದಕ್ಷಿಣ ವಿಭಾಗದ ಸಿಇಎನ್ ಅಪರಾಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

ABOUT THE AUTHOR

...view details