ಬೆಂಗಳೂರು: ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನಿಮಿತ್ತ ಸರ್ಕಾರ ಹಾಗೂ ನಾಗರಿಕ ಸಂಸ್ಥೆ ಯುನೈಟೆಡ್ ವೇ ಜಂಟಿಯಾಗಿ ಉತ್ತಮ ಆಡಳಿತ ದಿವಸ ಎಂದು ಆಚರಿಸಲಾಯಿತು.
ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನಾಚರಣೆ... ಬೆಂಗಳೂರು ಅಭಿವೃದ್ಧಿಗೆ ಸಂವಾದ - ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಆಚರಣೆ
ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನದ ನಿಮಿತ್ತ ಸರ್ಕಾರದ ಉತ್ತಮ ಆಡಳಿತ ದಿವಸ ಎಂದು ಆಚರಿಸಲಾಯಿತು. ಡಿಸಿಎಂ ಅಶ್ವತ್ಥ್ ನಾರಾಯಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡದ್ದರು.
![ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನಾಚರಣೆ... ಬೆಂಗಳೂರು ಅಭಿವೃದ್ಧಿಗೆ ಸಂವಾದ Birthday of former Prime Minister Vajpayee in bangalore](https://etvbharatimages.akamaized.net/etvbharat/prod-images/768-512-5489251-thumbnail-3x2-bgn.jpg)
ಬೆಂಗಳೂರು ಜನರ ಕುಂದು ಕೊರತೆಗಳಿಗೆ ಸ್ಥಳೀಯ ಇಲಾಖೆಗಳು ಎಷ್ಟು ಬೇಗ ಸ್ಪಂದಿಸುತ್ತದೆ ಹಾಗೂ ಪರಿಹರಿಸುತ್ತೆ. ನಗರ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹೇಗೆ, ನಗರದ ಆಡಳಿತವನ್ನು ಹೆಚ್ಚೆಚ್ಚು ಆನ್ ಲೈನ್ ಮಾಡುವುದು ಹಾಗೂ ರಸ್ತೆ ಇತಿಹಾಸಗಳನ್ನು ದಾಖಲೀಕರಣ ಮಾಡುವ ಬಗ್ಗೆ ವಿವರವಾದ ಚರ್ಚೆ ಹಾಗೂ ಸಂವಾದ ಮಾಡಲಾಯಿತು.
ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಜಲಮಂಡಳಿ ಅಧ್ಯಕ್ಷ ಕೆಂಪರಾಮಯ್ಯ, ಬಿಡಿಎ ಅಧ್ಯಕ್ಷ ಪ್ರಕಾಶ್, ಬೆಸ್ಕಾಂ ಎಂಡಿ ರಾಜೇಶ್ ಗೌಡ ಪಾಲ್ಗೊಂಡಿದ್ದರು.