ಕರ್ನಾಟಕ

karnataka

ETV Bharat / state

ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೈರತಿ ಬಸವರಾಜ್, ಬಿಬಿಎಂಪಿ ಆಯುಕ್ತರ ಭೇಟಿ - ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​

ಕೆ.ಆರ್​.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು, ಬಸವನಪುರ, ರಾಮಮೂರ್ತಿ ನಗರ, ವಿಜಿನಾಪುರ ಸೇರಿದಂತೆ ಹಲವು ವಾರ್ಡ್​ಗಳಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

Birati Basavaraj, BBMP Commissioner visits Mahadevapura Rain Effect Zone
ಮಹದೇವಪುರ ವಲಯದ ಮಳೆ ಹಾನಿ ಪ್ರದೇಶಕ್ಕೆ ಬೈರತಿ ಬಸವರಾಜ್, ಬಿಬಿಎಂಪಿ ಆಯುಕ್ತರ ಭೇಟಿ

By

Published : Sep 9, 2020, 10:58 PM IST

ಕೆ.ಆರ್​.ಪುರ (ಬೆಂಗಳೂರು): ಮಹದೇವಪುರ ವಲಯ ವ್ಯಾಪ್ತಿಯ ಕೆ.ಆರ್​.ಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಭೈರತಿ ಬಸವರಾಜ್ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮಳೆ ಹಾನಿ ಪ್ರದೇಶಕ್ಕೆ ಸಚಿವ ಭೈರತಿ ಬಸವರಾಜ್ ಹಾಗೂ ಬಿಬಿಎಂಪಿ ಆಯುಕ್ತರ ಭೇಟಿ

ಕೆ.ಆರ್​.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು, ಬಸವನಪುರ, ರಾಮಮೂರ್ತಿ ನಗರ, ವಿಜಿನಾಪುರ ಸೇರಿದಂತೆ ಹಲವು ವಾರ್ಡ್​ಗಳಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊರಮಾವು ವಾರ್ಡ್​ನಲ್ಲಿರುವ ಕೆಪಿಟಿಸಿಎಲ್​ಗೆ ಮಳೆ ನೀರು ನುಗ್ಗಿದ್ದರಿಂದ ವಿದ್ಯುತ್​ ವ್ಯತ್ಯಯವಾಗಿದೆ. ಹೀಗಾಗಿ ಈ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ ಸುಮಾರು 30 ಸಾವಿರ ಜನರು ಕಳೆದ ರಾತ್ರಿ ಹೋದ ವಿದ್ಯುತ್​ ಇಂದು‌ ಸಂಜೆಯಾದರೂ ಬಾರದಿದ್ದಕ್ಕೆ ಹೈರಾಣಾಗಿದ್ದಾರೆ.

ಕೆಪಿಟಿಸಿಎಲ್​ನ ಪಕ್ಕದ ಬಡಾವಣೆ ಹಾಗೂ ಸಾಯಿ ಬಡಾವಣೆಯಲ್ಲಿ ಮಳೆ ನೀರು ನುಗ್ಗಿ ಎಲ್ಲ ವಾಹನಗಳು ಜಲಾವೃತಗೊಂಡಿವೆ. ಮನೆಯಲ್ಲಿರುವ ಜನರು ಮೊದಲನೇ ಮಹಡಿಯಲ್ಲಿ ಕೂರುವಂತಾಗಿದೆ. ರಾಮಮೂರ್ತಿ ನಗರ ವಾರ್ಡ್​ನ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಅಂಗಡಿಗಳಿಗೆ ನೀರು ನುಗ್ಗಿ, ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಿಕ್ ವಸ್ತುಗಳು ಸೇರಿದಂತೆ ಹಲವು ವಸ್ತುಗಳು ಜಲಾವೃತಗೊಂಡಿವೆ. ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದೇ ಇದಕ್ಕೆಲ್ಲ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು, ರಾಜಕಾಲುವೆ ಒತ್ತುವರಿಯಿಂದಲೇ ಈ ಸಮಸ್ಯೆಯಾಗಿದ್ದು, ನಾಳೆ ಒತ್ತುವರಿಯಾಗಿರುವ ಜಾಗ ಯಾವ ಪ್ರಭಾವಶಾಲಿ ವ್ಯಕ್ತಿಯದ್ದೇ ಆದರೂ ತೆರವುಗೊಳಿಸುತ್ತೇನೆ. ಸರ್ಕಾರದ ಜಾಗ ಒಂದು ಇಂಚು ಬಿಡೋದಿಲ್ಲ. ಮಳೆಯಿಂದ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ABOUT THE AUTHOR

...view details