ಬೆಂಗಳೂರು: ಇಲ್ಲಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ವೇಳೆ ಭಾರತೀಯ ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಅವರು ಸ್ವದೇಶಿ ನಿರ್ಮಿತ ತೇಜಸ್ ವಿಮಾನದಲ್ಲಿ ಸಂಚರಿಸಿದರು.
ಸ್ವದೇಶಿ ನಿರ್ಮಿತ ತೇಜಸ್ ವಿಮಾನ ಏರಿದ ಸೇನಾ ಮುಖ್ಯಸ್ಥ ರಾವತ್ - ತೇಜಸ್ ವಿಮಾನ
ಬೆಂಗಳೂರಿನ ಪ್ರತಿಷ್ಟಿತ ಏರ್ ಶೋನಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ವದೇಶಿ ನಿರ್ಮಿತ ತೇಜಸ್ ವಿಮಾನದಲ್ಲಿ ಸಂಚರಿಸಿ ಸಂತಸ ಪಟ್ಟರು.
ತೇಜಸ್ ವಿಮಾನದಲ್ಲಿ ಸಂಚರಿಸಿದ ಬಿಪಿನ್ ರಾವತ್
ಬಿಪಿನ್ ರಾವತ್ ಅವರು ತೇಜಸ್ನಲ್ಲಿ ಕೋ-ಪೈಲಟ್ ಆಗಿ ಪ್ರಯಾಣ ಮಾಡಿದರು.
ಯುದ್ಧ ವಿಮಾನ ಹಾರಾಟದ ಅನುಭವ ಹಂಚಿಕೊಂಡ ರಾವತ್ ಅವರು ತೇಜಸ್ ವಿಮಾನದ ಟಾರ್ಗೆಟ್ ಚೆನ್ನಾಗಿದೆ. ಇದು ಸ್ವದೇಶಿ ನಿರ್ಮಿತ ಎಂಬುದು ಹೆಮ್ಮೆಯ ವಿಷಯ. ಭಾರತೀಯ ವಾಯುಪಡೆಯ ಶಕ್ತಿಯನ್ನು ಇದು ಇಮ್ಮಡಿಗೊಳಿಸಿದೆ ಎಂದು ತಿಳಿಸಿದ್ದಾರೆ.