ಕರ್ನಾಟಕ

karnataka

ETV Bharat / state

ವಿವಿಧ ನಾಮಗಳಿಂದ ದೊಡ್ಡ ಹಂಗಾಮ... ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ನಶೆ ಏರಿಸಿದ ಅನಿಕಾ ಹಿನ್ನೆಲೆ ಭಯಂಕರ! - ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ನಶೆ ಏರಿಸಿದ ಅನಿಕಾಳ ಹಿನ್ನೆಲೆ

ಡ್ರಗ್ಸ್​ ಪೆಡ್ಲರ್ ಅನಿಕಾಳ ವಿಚಾರಣೆಯನ್ನ ಎನ್​ಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ಆಕೆಯಿಂದ ಕೆಲ ಮಾಹಿತಿಗಳನ್ನು ಬಾಯ್ಬಿಡಿಸಿದ್ದಾರೆ.

ಅನಿಕಾ
ಅನಿಕಾ

By

Published : Sep 1, 2020, 1:05 PM IST

Updated : Sep 1, 2020, 1:17 PM IST

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ನಂಟು ಇದೆ ಎಂದು ಎನ್​ಸಿಬಿ ಅಧಿಕಾರಿಗಳ ಎದುರು ಬಾಯ್ಬಿಟ್ಟಿರುವ ಅನಿಕಾಳ ವಿಚಾರಣೆಯನ್ನ ಪೊಲೀಸರು ಚುರುಕುಗೊಳಿಸಿದ್ದಾರೆ. ತನಿಖಾಧಿಕಾರಿಗಳು ಪ್ರಕರಣದ ಕಿಂಗ್ ಪಿನ್ ಅನಿಕಾಳಿಂದ ಕೆಲ ಮಾಹಿತಿಗಳನ್ನು ಬಾಯ್ಬಿಡಿಸಿದ್ದಾರೆ.

ಈ ಕಿಂಗ್ ಪಿನ್ ಅನಿಕಾ ಡಿ ಯಾರು?

ಸ್ಯಾಂಡಲ್​ವುಡ್​ನ ಕೆಲವರಿಗೆ ಡ್ರಗ್ಸ್​ ಘಾಟು ಇರುವ ಕಾರಣ ಈ ಅನಿಕಾ ಡ್ರಗ್ಸ್​ ಪೆಡ್ಲರ್ ಆಗಿ ಕೆಲಸ ಮಾಡ್ತಿದ್ಲು. ಡ್ರಗ್ಸ್​ ಸಪ್ಲೈ ಮಾಡುವಾಗ ಪೊಲೀಸರ ಕೈಗೆ ಸಿಗಬಾರದು ಅನ್ನೋ ಕಾರಣಕ್ಕೆ ಈಕೆ ಅನಿಕಾ ಡಿ, ಅನಿ, ಡಿ ಮನಿ ಅನ್ನೋ ಹೆಸರಳನ್ನಿಟ್ಟುಕೊಂಡು ಡ್ರಗ್ಸ್​ ಪೂರೈಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಅನಿಕಾಗೆ ಕೇವಲ 24 ವರ್ಷವಾಗಿದ್ದು, ಇವಳು ಮೂಲತಃ ತಮಿಳುನಾಡಿನ ಸೇಲಂನ ಯೆರ್ಕಾಡ್ ಸಿಟಿಯವಳಾಗಿದ್ದಾಳೆ. ಈಕೆಯ ಅಪ್ಪನಿಗೆ ಮೂವರು ಮಕ್ಕಳು. ಈಕೆಗೆ ಓರ್ವ ಸಹೋದರಿ ಮತ್ತು ಸಹೋದರ ಇದ್ದಾರೆ.

ಯೆರ್ಕಾಡ್ ನ ಖಾಸಗಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್‌ ಕೋರ್ಸ್​ ಕಲಿತಿರುವ ಈಕೆ, ಎರಡನೇ ವರ್ಷಕ್ಕೆ ಡಿಗ್ರಿ ಡ್ರಾಪ್ ಮಾಡಿದ್ದಳು. ನಂತರ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಳು. ನಗರಕ್ಕೆ ಬಂದವಳು ನಗರದ ದೊಡ್ಡಗುಬ್ಬಿಯಲ್ಲಿ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದು, ಸ್ಯಾಂಡಲ್​ವುಡ್​ನವರಿಗೆ ಡ್ರಗ್ಸ್​ ಸಪ್ಲೈ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಸದ್ಯ ಎನ್​ಸಿಬಿ ಅಧಿಕಾರಿಗಳು ಅನಿಕಾಳಿಂದ ಹಲವಾರು ಮಾಹಿತಿಗಳನ್ನ ಕಲೆಹಾಕಿದ್ದಾರೆ. ಹಾಗೆಯೇ ಇಂದ್ರಜಿತ್ ಲಂಕೇಶ್ ಸಿಸಿಬಿಗೆ ಕೆಲ ಸಾಕ್ಷಿಗಳನ್ನು ನೀಡಿದ ಕಾರಣ ತನಿಖಾ ತಂಡ ಜಂಟಿಯಾಗಿ ಕಾರ್ಯನಿರ್ವಹಣೆ ಮಾಡಲು ನಿರ್ಧರಿಸಿದೆ.

Last Updated : Sep 1, 2020, 1:17 PM IST

ABOUT THE AUTHOR

...view details