ಬೆಂಗಳೂರು:ಕರ್ನಾಟಕದ ಉದ್ಯಮಿ, ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪತಿ ಜಾನ್ ಶಾ(73) ನಿಧನರಾಗಿದ್ದಾರೆ.
ಕರುಳಿನ ಕ್ಯಾನ್ಸರ್ನಿಂದ ಅವರು ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಗರದ ವಿಲ್ಸನ್ ಗಾರ್ಡನ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಜಾನ್ ಶಾ ಅವರು ಬಯೋಕಾನ್ ಕಂಪನಿಯ ಸಲಹಾ ಸಮಿತಿಯ ಜವಾಬ್ದಾರಿ ನಿಭಾಯಿಸುತ್ತಿದ್ದರು. ಮಧುರಾ ಕೋಟ್ಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರು ಕೂಡಾ ಹೌದು. ಕೋಟ್ಸ್ ವಿಯೆಲ್ಲಾ ಗ್ರೂಪ್‌ನ ಮಾಜಿ ಹಣಕಾಸು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಎಂದು ಕಂಪನಿಯ ವೆಬ್ಸೈಟ್ ತಿಳಿಸುತ್ತದೆ.
ಇದನ್ನೂ ಓದಿ:ಮರ್ಯಾದೆಗೆ ಅಂಜಿ ಸ್ವಾಮೀಜಿ ಆತ್ಮಹತ್ಯೆ?.. ಡೆತ್ನೋಟ್ನಲ್ಲಿರುವುದು ಏನು?