ಕರ್ನಾಟಕ

karnataka

ETV Bharat / state

ಡ್ರಗ್ಸ್​ ಪ್ರಕರಣ: ಕೇರಳ ಮಾಜಿ ಸಚಿವರ ಪುತ್ರ ಬಿನೇಶ್ ಕೊಡಿಯೇರಿ 4 ದಿನ ಇಡಿ ಕಸ್ಟಡಿಗೆ - Bangalore drug link case

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಕೇರಳದ ಮಾಜಿ ಗೃಹ‌ ಸಚಿವ ಬಾಲಕೃಷ್ಣನ್ ಅವರ ಮಗ ಬಿನೇಶ್ ಕೊಡಿಯೇರಿಯನ್ನು ಇಡಿ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ನ್ಯಾಯಾಲಯ ಕೊಡಿಯೇರಿಯನ್ನು 4 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ.

binesh-kodiyeri-remanded-ed-custody-for-4-days
ಬಿನೇಶ್ ಕೊಡಿಯೇರಿ 4 ದಿನ ಇಡಿ ಕಸ್ಟಡಿಗೆ

By

Published : Oct 29, 2020, 5:30 PM IST

ಬೆಂಗಳೂರು: ಡ್ರಗ್ಸ್ ಕೇಸ್​​ನಲ್ಲಿ ಕೇರಳ ಮಾಜಿ ಗೃಹ‌ಸಚಿವ ಬಾಲಕೃಷ್ಣನ್ ಅವರ ಮಗ ಬಿನೇಶ್ ಕೊಡಿಯೇರಿಯನ್ನು ಬೆಂಗಳೂರಿನಲ್ಲಿರುವ ಜಾರಿ‌ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದು, 4 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.

ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಮೊಹಮ್ಮದ್ ಅನುಪ್ ಜೊತೆ ನಂಟು ಹೊಂದಿದ ಆರೋಪದಡಿ ಇಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿತ್ತು.

ಇದರಂತೆ ಇಂದು ಬೆಳಗ್ಗೆ 10.30ರ ಸುಮಾರಿಗೆ ಬೆಂಗಳೂರಿನ‌ ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಆಗಮಿಸಿ ತನಿಖಾಧಿಕಾರಿಗಳ ಮುಂದೆ ಬಿನೇಶ್ ಹಾಜರಾಗಿದ್ದರು. ವಿಚಾರಣೆ ಮುಗಿದ ಬಳಿಕ ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತ್ತು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯ 4 ದಿನಗಳ ಕಾಲ ಇಡಿ ವಶಕ್ಕೆ ನೀಡಿದೆ.

ಇದನ್ನೂ ಓದಿ: ಡ್ರಗ್ಸ್​​ ದಂಧೆ ಪ್ರಕರಣ: ಕೇರಳ ಮಾಜಿ ಗೃಹ ಸಚಿವರ ಮಗನ ಬಂಧನ

ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿ ಅನುಪ್ ಮೊಹಮ್ಮದ್​ಗೆ ಬಿನೇಶ್ ಹಣಕಾಸಿನ ನೆರವು ನೀಡಿ ನಿರಂತರ ಸಂಪರ್ಕದಲ್ಲಿದ್ದ ಎಂಬ ಆರೋಪವಿದೆ. ಸ್ಯಾಂಡಲ್​​ವುಡ್ ನಟ-ನಟಿಯರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ, ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ದ ಎಂಬ ಆರೋಪ ಸಹ ಇದೆ.

ಡ್ರಗ್ಸ್ ಕೇಸ್​​ನಲ್ಲಿ ಈಗಾಗಲೇ ಅನುಪ್ ಮೊಹಮ್ಮದ್, ಅನಿಕಾ ಸೇರಿದಂತೆ ಹಲವು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ABOUT THE AUTHOR

...view details