ಕರ್ನಾಟಕ

karnataka

ETV Bharat / state

ಪರಿಹಾರ ಕುರಿತ ಆಯುಕ್ತರ ಹೇಳಿಕೆ:  ಕೋರ್ಟ್ ಮೆಟ್ಟಿಲೇರಲು ಹುಳಿಮಾವು ನಿವಾಸಿಗಳು ಸನ್ನದ್ಧ..!

ಹುಳಿಮಾವು ಕರೆ ಒಡೆತ ಪ್ರಕರಣದಲ್ಲಿ ಕಾರುಗಳು ನೀರಿನಲ್ಲಿ ಮುಳುಗಿ ಭಾರಿ ನಷ್ಟಕ್ಕೆ ಕಾರಣವಾಗಿದೆ. ಈ ಸಂಬಂಧ ನಷ್ಟಕ್ಕೊಳಗಾದ ಮಾಲೀಕರಿಗೆ ಪರಿಹಾರ ನೀಡುವುದು ನಮಗೆ ಸಂಬಂಧಿಸಿದ್ದಲ್ಲ ಎಂದಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿದ್ದಾರೆ.

By

Published : Nov 30, 2019, 10:23 AM IST

bng
ಕೋರ್ಟ್ ಮೆಟ್ಟಿಲೇರಲಿರುವ ಹುಳಿಮಾವು ನಿವಾಸಿಗಳು..!

ಬೆಂಗಳೂರು: ಹುಳಿಮಾವು ಕೆರೆ ಕೊಡಿ ಒಡೆದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಅಪಾರ್ಟ್​ಮೆಂಟ್​ನ ಕೆಳಮಹಡಿಗಳಲ್ಲಿ ನಿಲ್ಲಿಸಿದ್ದ ನೂರಾರು ಕಾರುಗಳು ಎರಡು ದಿನಗಳ‌ ಕಾಲ ನೀರಿನಲ್ಲಿ ಇದ್ದ ಕಾರಣ ಸಂಪೂರ್ಣ ಹಾಳಾಗಿದ್ದು, ಲಕ್ಷಾಂತರ ಮೌಲ್ಯದ ಕಾರಗಳು ನಾಶವಾಗಿವೆ. ಹೀಗಾಗಿ ನಮಗೆ ಬಿಬಿಎಂಪಿ ಸರಿಯಾದ ಪರಿಹಾರ ನೀಡದೇ ಇದ್ದರೆ, ಕೋರ್ಟ್​ ಮೆಟ್ಟಿಲು ಏರುವುದಾಗಿ ಅಲ್ಲಿನ ನಿವಾಸಿಗಳು ಎಚ್ಚರಿಕೆ ರವಾನಿಸಿದ್ದಾರೆ.

ಕೋರ್ಟ್ ಮೆಟ್ಟಿಲೇರಲಿರುವ ಹುಳಿಮಾವು ನಿವಾಸಿಗಳು..!

ಪರಿಹಾರ ನೀಡುತ್ತೇವೆ ಎನ್ನುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಾವು ಯಾವುದೇ ಕಾರಣಕ್ಕೂ ಪರಿಹಾರ ನೀಡುವುದಿಲ್ಲ ಎಂದು ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ. ಇದು ಹುಳಿಮಾವು ಸಂತ್ರಸ್ಥರನ್ನು ರೊಚ್ಚಿಗೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ನಷ್ಟಕ್ಕೊಳಗಾಗಿರುವ ಕಾರುಗಳ ಮಾಲೀಕರು ನಾವು ಪ್ರಧಾನಮಂತ್ರಿಗೆ ಪತ್ರ ಬರೆಯಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಇದು ಪ್ರಕೃತಿ ವಿಕೋಪವಾಗಿದ್ದರೆ ನಾವು ಸುಮ್ಮನಾಗುತ್ತಿದ್ದೆವು. ಯಾರದೋ ಬೇಜವಾಬ್ದಾರಿಗೆ ನಮ್ಮ ಮನೆಯ ವಸ್ತುಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ, ನಮಗೆ ಅಲ್ಪಸ್ವಲ್ಪ ಹಣದ ಅವಶ್ಯಕತೆ ಇಲ್ಲ ದಯವಿಟ್ಟು ಸಂಪೂರ್ಣ ಕಾರನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿಸಿಕೊಡಿ ಇಲ್ಲವೇ ಕೋರ್ಟ್​ ಮೆಟ್ಟಿಲೇರುತ್ತೇವೆ ಎನ್ನುತ್ತಿದ್ದಾರೆ ಕಾರಿನ ಮಾಲೀಕರು.

ABOUT THE AUTHOR

...view details