ಕರ್ನಾಟಕ

karnataka

ETV Bharat / state

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ವೀಲಿಂಗ್​ ಹಾವಳಿ - ಬೆಂಗಳೂರು ಸುದ್ದಿ

ಪೊಲೀಸರು ಎಷ್ಟೇ ಕ್ರಮ ತೆಗೆದುಕೊಂಡರೂ ಸಹ ಸಿಲಿಕಾನ್ ಸಿಟಿಯಲ್ಲಿ ಮಾತ್ರ ಪುಂಡರ ವೀಲಿಂಗ್​ ಹಾವಳಿ ನಿಲ್ಲುವಂತೆ ಕಾಣಿಸುತ್ತಿಲ್ಲ. ನಗರದಲ್ಲಿ ಇದರ ಹಾವಳಿ ಮತ್ತೆ ಶುರುವಾದಂತೆ ಕಾಣುತ್ತಿದೆ.

Bike wheeling problem in Bengaluru, Bengaluru news, Bengaluru Wheeling news, ಬೆಂಗಳೂರಿನಲ್ಲಿ ಬೈಕ್ ವೀಲಿಂಗ್ ಸಮಸ್ಯೆ, ಬೆಂಗಳೂರು ಸುದ್ದಿ, ಬೆಂಗಳೂರು ವೀಲಿಂಗ್ ಸುದ್ದಿ,
ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ವೀಲಿಂಗ್​ ಹಾವಳಿ

By

Published : Jun 24, 2022, 10:34 AM IST

ಬೆಂಗಳೂರು: ಬೆಂಗಳೂರಿನಲ್ಲಿ ವೀಲಿಂಗ್ ಹಾವಳಿ ಮತ್ತೆ ತಲೆ ಎತ್ತಿದೆ. ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ಮೂರು ದ್ವಿಚಕ್ರ ವಾಹಗಳಲ್ಲಿ ಪುಂಡರು ವೀಲಿಂಗ್ ಮಾಡುವ ದೃಶ್ಯ ಮೊಬೈಲ್​ನಲ್ಲಿ ಸರೆಯಾಗಿದೆ‌. ಮೊನ್ನೆ ರಾತ್ರಿ 9 ಗಂಟೆ ಸುಮಾರಿಗೆ ವಾಹನ ದಟ್ಟಣೆ ಇರುವ ವೇಳೆಯಲ್ಲೇ ಪುಂಡರು ವೀಲಿಂಗ್​ ಮಾಡುವ ಮೂಲಕ ಹುಚ್ಚಾಟ ಪ್ರದರ್ಶಿಸಿದರು.

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಪುಂಡರ ವೀಲಿಂಗ್​ ಹಾವಳಿ

ಅಷ್ಟೇ ಅಲ್ಲ ಇವರು ಹೆಲ್ಮೆಟ್ ಧರಿಸದೇ ಒವರ್ ಸ್ಪೀಡ್ ಆಗಿ ಅಡ್ಡಾದಿಡ್ಡಿ ದ್ವಿಚಕ್ರ ವಾಹನಗಳನ್ನ ಓಡಿಸಿದ್ದಾರೆ. ಯುವಕರ ಹುಚ್ಚಾಟದಿಂದ ಇತರೇ ವಾಹನ ಸವಾರರಿಗೆ ಸಂಕಷ್ಟ ಅನುಭವಿಸುವಂತಾಗಿದೆ. ರೀಲ್ಸ್ ಶೋಕಿಗಾಗಿ ನಕಲಿ ನಂಬರ್ ಫ್ಲೇಟ್ ಅಳವಡಿಸಿಕೊಂಡು ಯುವಕರ ವೀಲಿಂಗ್ ಮಾಡ್ತಿದ್ದಾರೆ ಎನ್ನಲಾಗ್ತಿದೆ.

ಓದಿ:ಶಕ್ತಿಮಾನ್​ ರೀತಿ ಗಾಳಿಯಲ್ಲಿ ಹಾರಲು ಹೋಗಿ ಜೈಲಿನಲ್ಲಿ ಲ್ಯಾಂಡ್​ ಆದ ಯುವಕ.. ವಿಡಿಯೋ

ಏರಿಯಾದಲ್ಲಿ ವೀಲಿಂಗ್ ಹುಚ್ಚಾಟ ನಡೆಸುವವರ ಬಗ್ಗೆ ಸಾರ್ವಜನಿಕರು ಸ್ಥಳೀಯ ಠಾಣೆಗಳಿಗೆ ಮಾಹಿತಿ ನೀಡುವಂತೆ ಪೊಲೀಸರು ಸಹ ಮನವಿ ಮಾಡಿದ್ದಾರೆ. ಈಗ ಈ ವಿಡಿಯೋ ಪೊಲೀಸ್​ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಪುಂಡರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

ABOUT THE AUTHOR

...view details