ಕರ್ನಾಟಕ

karnataka

ETV Bharat / state

ಬೈಕ್ ವೀಲ್ಹಿಂಗ್: ಯುವಕರಿಬ್ಬರ ಮೇಲೆ ಪ್ರಕರಣ ದಾಖಲು, ಬೈಕ್​ಗಳು ವಶಕ್ಕೆ

ವೀಲ್ಹಿಂಗ್​ ಮಾಡುತ್ತಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ.

bike-wheeling-case-filed-against-youths-bikes-detained
ಬೈಕ್​ಗಳು ವಶಕ್ಕೆ

By

Published : Mar 30, 2021, 6:19 AM IST

ಬೆಂಗಳೂರು: ಬೈಕ್ ವೀಲ್ಹಿಂಗ್​ ಮಾಡುತ್ತಿದ್ದ ಇಬ್ಬರ ವಿರುದ್ಧ ಪುಲಿಕೇಶಿ ನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರಂಜಿತ್ ಪ್ರಸನ್ನ (19), ಸೈಯ್ಯದ್ ಉಸ್ಮಾನ್ (17) ಎಂಬುವರ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೈಯ್ಯದ್ ಉಸ್ಮಾನ್ ಸೋಮವಾರ ಬೆಳಗಿನ ಸಮಯದಲ್ಲಿ ಪುಲಿಕೇಶಿ ನಗರದ ನೇತಾಜಿ ರಸ್ತೆಯ ಜಿ.ಕೆ. ವೇಲ್ ಹತ್ತಿರ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ. ಇದನ್ನು ಗಮನಿಸಿದ ಪುಲಿಕೇಶಿ ನಗರದ ಸಂಚಾರ ಠಾಣೆ ಪೊಲೀಸರು ಸೈಯ್ಯದ್ ವಿರುದ್ಧ ಕಲಂ 184, 189, 129, 177 ಸೇರಿದಂತೆ ಇನ್ನಿತರ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ :ಬುದ್ಧಿ ಕಲಿಯದ ವ್ಹೀಲಿಂಗ್​​ ಪುಂಡರು.. ಕೋಲಾರ ಜನರ ಕುತ್ತಿಗಿಗೆ ಬಂದಿದೆ ಬೈಕರ್ಸ್​​ ಸರ್ಕಸ್​​​​​​​​

ಹಾಗೆಯೇ ಮಧ್ಯಾಹ್ನದ ಸಮಯದಲ್ಲಿ ಪಾಟರಿ ರಸ್ತೆಯಲ್ಲಿ ಹೋಂಡಾ ಡಿಯೋ ಬೈಕ್‌ನಲ್ಲಿ ರಂಜಿತ್ ಪ್ರಸನ್ನ ವೀಲ್ಹಿಂಗ್ ಮಾಡುತ್ತಿದ್ದ. ಇದನ್ನು ಗಮನಿಸಿದ ಬೈಕ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಪುಲಿಕೇಶಿ ನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details