ಕರ್ನಾಟಕ

karnataka

ನಂಬರ್​ ಪ್ಲೇಟ್​ ಇಲ್ಲದ ಬೈಕ್​ಗಳಲ್ಲಿ ವೀಲಿಂಗ್​... ನಾಲ್ವರನ್ನು ಬಂಧಿಸಿದ ಕೆ.ಆರ್​ ಪುರಂ ಪೊಲೀಸರು

By

Published : Apr 16, 2021, 2:40 AM IST

ನಂಬರ್ ಪ್ಲೇಟ್ ಇಲ್ಲದ ಬೈಕ್​ಗಳಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bike wheelers arrested, Bike wheelers arrested by Bangalore police, Bangalore police, Bangalore police news,  ವೀಲಿಂಗ್ ಮಾಡುತ್ತಿದ್ದ ಪುಂಡರು ಪೊಲೀಸ್ ವಶಕ್ಕೆ,  ವೀಲಿಂಗ್ ಮಾಡುತ್ತಿದ್ದ ಪುಂಡರು ಬೆಂಗಳೂರು ಪೊಲೀಸ್ ವಶಕ್ಕೆ, ಬೆಂಗಳೂರು ಪೊಲೀಸ್​, ಬೆಂಗಳೂರು ಪೊಲೀಸ್​ ಸುದ್ದಿ,
ನಾಲ್ವರನ್ನು ಬಂಧಿಸಿದ ಕೆ.ಆರ್​ ಪುರಂ ಪೊಲೀಸರು

ಬೆಂಗಳೂರು: ನಂಬರ್ ಪ್ಲೇಟ್ ಇಲ್ಲದ ಬೈಕ್​ಗಳಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡರನ್ನು ಕೆ.ಆರ್.ಪುರಂ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ವೀಲಿಂಗ್ ಮಾಡುತ್ತಿದ್ದ ಬೈಕ್​ಗಳನ್ನು ಬಿಟ್ಟು ಪರಾರಿಯಾಗಿದ್ದ ನಾಲ್ವರು ಆರೋಪಿಗಳಾದ ಯಾಸೀನ್ (18), ಮುಬಾರಕ್ (20), ಉಮರ್ (18) ಹಾಗೂ ಧನುಷ್ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಕೆ.ಆರ್.ಪುರ ಠಾಣಾ ಸಂಚಾರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಲ್ವರನ್ನು ಬಂಧಿಸಿದ ಕೆ.ಆರ್​ ಪುರಂ ಪೊಲೀಸರು

ಬುಧವಾರ ಬೆಳಗ್ಗೆ ಸುಮಾರು 7 ರಿಂದ 7:15 ಗಂಟೆ ಸಮಯದಲ್ಲಿ ಹೊಸಕೋಟೆ ಕಡೆಯಿಂದ ಎರಡು ಬೈಕ್​ಗಳಲ್ಲಿ ವೀಲಿಂಗ್ ಮಾಡಿಕೊಂಡು ಬೇರೆ ವಾಹನದ ಸವಾರರಿಗೆ ತೊಂದರೆ ಕೊಡುತ್ತಿದ್ದರು. ಈ ವಾಹನ ಸವಾರರನ್ನು ಹಿಂಬಾಲಿಸಿಕೊಂಡು ಪತ್ರಕರ್ತರೊಬ್ಬರು ಈ ಬಗ್ಗೆ ಕರ್ತವ್ಯನಿರತ ಜಂಕ್ಷನ್ ಜಾಕಿಗೆ ಮಾಹಿತಿ ನೀಡಿದ್ದರು.

ಈ ಸಂದರ್ಭದಲ್ಲಿ ಕೆಆರ್​ ಪುರಂ ಭಟ್ಟರಹಳ್ಳಿ ಸಿಗ್ನಲ್​ನಲ್ಲಿ ಕರ್ತವ್ಯನಿರತ ಜಂಕ್ಷನ್ ಜಾಕಿ ಸೋಮಪ್ಪ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಪೊಲೀಸರನ್ನು ಕಂಡ ಬೈಕ್​ ಸವಾರರು ತಮ್ಮ ಎರಡು ಬೈಕ್​ಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.

ಸಂಚಾರ ಪೊಲೀಸರು ಈ ವಾಹನಗಳನ್ನು ವಶಕ್ಕೆ ಪಡೆದು ಕೆ.ಆರ್.ಪುರ ಸಂಚಾರ ಠಾಣೆಗೆ ಸ್ಥಳಾಂತರಿಸಿದರು. ಈ ವಾಹನಗಳಲ್ಲಿ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ. ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ಇಂಜಿನ್ ಹಾಗೂ ಚಾಸಿ ನಂಬರ್ ಆಧಾರದಲ್ಲಿ ಗುರುವಾರ ವಾಹನ ಮಾಲೀಕರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದರು.

ಪತ್ತೆಯಾದ ನಂತರ ವಾಹನದ ಮಾಲೀಕರನ್ನು ಕರೆದು ವಿಚಾರಿಸಿದಾಗ ವೀಲಿಂಗ್ ಮಾಡುತ್ತಿದ್ದವರು ಸಿಕ್ಕಿಹಾಕಿಕೊಂಡಿದ್ದಾರೆ. ನಂತರ ವೀಲಿಂಗ್ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಪೊಲೀಸರು ಕಾನೂನು ಕ್ರಮ ಕೈಗೊಂಡರು.

ABOUT THE AUTHOR

...view details