ಕರ್ನಾಟಕ

karnataka

ETV Bharat / state

ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳನ್ನು ಕದ್ದು ಶೋಕಿ ಬದುಕು: ಮೂವರು ಅರೆಸ್ಟ್‌ - Doddaballapura

ದೊಡ್ಡಬಳ್ಳಾಪುರ ಸುತ್ತಮುತ್ತ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

Bike thieves arrested
ಬೈಕ್​​ ಕಳ್ಳತನ: ಮೂವರು ಆರೋಪಿಗಳ ಬಂಧನ

By

Published : Jul 15, 2021, 3:50 PM IST

ದೊಡ್ಡಬಳ್ಳಾಪುರ:ನಕಲಿ ಕೀ ಬಳಸಿ, ಹ್ಯಾಂಡಲ್ ಮುರಿದು ದೊಡ್ಡಬಳ್ಳಾಪುರ ಸುತ್ತಮುತ್ತ ಬೈಕ್ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೂಪುರದ ಪ್ರವೀಣ್, ಸೈಯದ್ ನಿಜಮ್ ಹಾಗು ದೊಡ್ಡಬಳ್ಳಾಪುರದ ಮಹಮ್ಮದ್ ಪಾಷ ಬಂಧಿತರು.

ಬಂಧಿತ ಆರೋಪಿಗಳು

ಅಪರಾಧ ಪ್ರಕರಣವೊಂದರ ಹಿನ್ನೆಲೆಯಲ್ಲಿ ಜೈಲಿಗೆ ಹೋದಾಗ ಈ ಮೂವರು ಆರೋಪಿಗಳ ನಡುವೆ ಸ್ನೇಹ ಬೆಳೆದಿದೆ. ಜೈಲಿನಿಂದ ಹೊರ ಬಂದ ನಂತರ ಬೈಕ್ ಕಳ್ಳತನದಲ್ಲಿ ತೊಡಗಿದ್ದರು. ಬೆಂಗಳೂರು ನಗರದ ಯಶವಂತಪುರ ಸೇರಿದಂತೆ ವಿವಿಧ ಪ್ರದೇಶ, ದೊಡ್ಡಬಳ್ಳಾಪುರದ ವಿವಿಧ ರಸ್ತೆಗಳು, ಮನೆಯ ಮುಂದೆ ನಿಲ್ಲಿಸಿದ ಬೈಕ್​​ಗಳನ್ನು ಆರೋಪಿಗಳು ಕಳವು ಮಾಡುತ್ತಿದ್ದರು.

ನಕಲಿ ಕೀ ಬಳಸಿ, ಹ್ಯಾಂಡಲ್ ಮುರಿದು ಕದ್ದ ಬೈಕ್‌ಗಳನ್ನ ಹಿಂದೂಪುರ ಸೇರಿದಂತೆ ಪರಿಚಯಸ್ಥರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣದಲ್ಲಿ ಶೋಕಿ ಜೀವನ ನಡೆಸುತ್ತಿದ್ದರು. ಇವರಿಂದ ಪೊಲೀಸರು 16 ಬೈಕ್​​ಗಳನ್ನು ಜಪ್ತಿ ಮಾಡಿದ್ದಾರೆ.

ABOUT THE AUTHOR

...view details