ಬೆಂಗಳೂರು:ವ್ಹೀಲಿಂಗ್ ಮಾಡುವುದಕ್ಕಾಗಿಯೇ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ವಿವಿಧ ಕಂಪನಿಗಳ 9 ದ್ವಿಚಕ್ರ ವಾಹನಗಳನ್ನು ಚಂದ್ರಾ ಲೇಔಟ್ ಪೊಲೀಸರು ಜಪ್ತಿ ಮಾಡಿದ್ದಾರೆ.
ನವಾಜ್ ಪಾಷಾ ಹಾಗೂ ರಿಜ್ವಾನ್ ಪಾಷಾ ಬಂಧಿತರು. ಇವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಶೋಕಿಗಾಗಿ ತಿರುಗಾಡಲು ಹಾಗೂ ವ್ಹೀಲಿಂಗ್ ಮಾಡಲು ಬೈಕ್ ಕದಿಯುತ್ತಿರುವ ವಿಚಾರ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವ್ಹೀಲಿಂಗ್ ಮಾಡಲೆಂದೇ ಬೈಕ್ ಕಳ್ಳತನ ಮೆಕ್ಯಾನಿಕ್ ಆಗಿ ಬೈಕ್ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ನವಾಜ್ ಪಾಷಾ ಹಾಗೂ ಸಹಚರ ಸೇರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳ ಹ್ಯಾಂಡಲ್ ಮುರಿದು ಕಳ್ಳತನ ಮಾಡಿದ್ದರು. ಬಳಿಕ ಬೈಕ್ಗಳ ಬಂಪರ್ ಸೇರಿದಂತೆ ಸಂಪೂರ್ಣವಾಗಿ ಬದಲಾಯಿಸುತ್ತಿದ್ದರು. ಜೊತೆಗೆ ಬೈಕ್ಗಳ ನೋಂದಣಿ ಸಂಖ್ಯೆ ಚೇಂಜ್ ಮಾಡುತ್ತಿದ್ದರು. ಕದ್ದ ಬೈಕಿನಲ್ಲಿ ನಗರದೆಲ್ಲೆಡೆ ವ್ಹೀಲಿಂಗ್ ಮಾಡುತ್ತಿದ್ದರು.
ಇವರ ವಿರುದ್ಧ ಕಾಟನ್ ಪೇಟೆ, ಮಹಾಲಕ್ಷ್ಮೀ ಲೇಔಟ್, ವಿಜಯನಗರ, ಯಲಹಂಕ ಹಾಗೂ ಕನಕಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ 3ನೇ ಮಹಡಿಯಿಂದ ಜಿಗಿದು SSLC ವಿದ್ಯಾರ್ಥಿನಿ ಆತ್ಮಹತ್ಯೆ: ಪ್ರೇಮ ವೈಫಲ್ಯ ಶಂಕೆ