ಬೆಂಗಳೂರು: ಧರ್ಮಪುರಿಯಲ್ಲಿ ಅರಣ್ಯಾಧಿಕಾರಿಯ ರಾಯಲ್ ಎನ್ಫೀಲ್ಡ್ ಬೈಕ್ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳರನ್ನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶಾನ್, ರಂಜಿತ್ ಕುಮಾರ್, ಶಾಹೀನ್ ಶಾ ಹಾಗೂ ಶಿವ ಬಂಧಿತ ಆರೋಪಿಗಳು.
ಬೈಕ್ ನಂಬರ್ ಪ್ಲೇಟ್ ಬದಲಿಸಿ ಮಾರಾಟ: ಐಷಾರಾಮಿ ಜೀವನಕ್ಕಾಗಿ ದ್ವಿಚಕ್ರ ವಾಹನಗಳು, ಆಟೋಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅವುಗಳ ನಂಬರ್ ಪ್ಲೇಟ್ ಬದಲಿಸಿ ತಮಿಳುನಾಡಿನ ತಿರುವಣ್ಣಾಮಲೈ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ 10-15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇತ್ತೀಚಿಗೆ ಧರ್ಮಪುರಿಯ ಜಯಬಾಲ್ ಎಂಬ ಅರಣ್ಯಾಧಿಕಾರಿಯ ರಾಯಲ್ ಎನ್ಫೀಲ್ಡ್ ಕಳ್ಳತನ ಮಾಡಿದ್ದರು.