ಬೆಂಗಳೂರು:ಕೋವಿಡ್ಮೊದಲ ಅಲೆಯ ವೇಳೆಲಾಕ್‌ಡೌನ್ ಮಾಡಿದ ಸಂದರ್ಭ ಕೊರೊನಾ ಭೀತಿಯಿಂದ ಜನರ ಓಡಾಟ ಸ್ಥಗಿತವಾಗಿತ್ತು. ಅಲ್ಲದೇ ಕಳ್ಳತನ ಪ್ರಕರಣಗಳು ಕೂಡ ವಿರಳವಾಗಿದ್ದವು. ಆದ್ರೆ ಎರಡನೇ ಅಲೆಯಲ್ಲಿ ಲಾಕ್‌ಡೌನ್ ಮಾಡಿದನ್ನೇ ಸದುಪಯೋಗ ಮಾಡಿಕೊಂಡಿರುವ ಖದೀಮರು ಬೈಕ್ ಕಳ್ಳತನ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮೂವರು ಬೈಕ್ ಕಳ್ಳರ ಬಂಧನ: 6 ಬೈಕ್ ಜಪ್ತಿ - Bangalore latest crime news
ಲಾಕ್‌ಡೌನ್ ವೇಳೆ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೆ.ಜೆ.ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ಸದ್ಯ ಜೆ.ಜೆ.ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಬೀರ್ (20), ರೋಷನ್ (20) ಹಾಗೂ ಅಸ್ಟರ್ ಪಾಷಾ (20) ಬಂಧಿತರು. ಆರೋಪಿಗಳು ಜೆ.ಜೆ ನಗರ, ಕೆಂಗೇರಿ, ಕುಂಬಳಗೋಡು, ಸಿಟಿ ಮಾರ್ಕೆಟ್ ಹಾಗೂ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು ಎನ್ನಲಾಗ್ತಿದೆ.
ಸದ್ಯ ಬಂಧಿತರಿಂದ 4 ಲಕ್ಷ ರೂ. ಮೌಲ್ಯದ 6 ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.