ಬೆಂಗಳೂರು: ಕೊರೊನಾ ಅಟ್ಟಹಾಸದ ನಡುವೆ ಕೊರೊನಾವನ್ನ ಲೆಕ್ಕಿಸದೇ ಗಲ್ಲಿ ಗಲ್ಲಿಯಲ್ಲಿ ತಿರುಗಿ ರಾಬರ್ಸ್ ಗ್ಯಾಂಗ್ ಸಿಟಿ ಜನತೆಗೆ ಹಾವಳಿ ನೀಡುತ್ತಿದ್ದಾರೆ.
ಮನೆ ಮುಂದೆ ನಿಲ್ಲಿಸಿದ ಬೈಕ್ಗಳೇ ಇವರ ಟಾರ್ಗೆಟ್: ಕೊರೊನಾ ಇದ್ದರೂ ಡೋಂಟ್ ಕೇರ್ - Bangalore Bike theft is on the rise News
ಚಾಮರಾಜಪೇಟೆಯ ವಾಲ್ಮೀಕಿ ನಗರದ ಬಳಿ ತಡರಾತ್ರಿ ಆದರೆ ಸಾಕು ಆ ಏರಿಯಾದ ಗಲ್ಲಿ ಗಲ್ಲಿಯಲ್ಲಿ ಒಂದು ಗ್ಯಾಂಗ್ ಕೈಯಲ್ಲಿ ಟೂಲ್ಸ್ ಹಿಡಿದು ಮೊದಲು ಗಲ್ಲಿ ರೌಂಡ್ಸ್ ಹಾಕುತ್ತಾರೆ. ತದನಂತರ ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ಗಳನ್ನ ಟಾರ್ಗೆಟ್ ಮಾಡಿ ಬೈಕ್ ಲಾಕ್ ಒಡೆದು ಡಿಕ್ಕಿಯಲ್ಲಿ ಕೈಗೆ ಸಿಕ್ಕ ವಸ್ತು ಎಗರಿಸುತ್ತಾರೆ. ಹಾಗೆ ಕೆಲವೊಂದು ಬೈಕ್ಗಳನ್ನು ಕಳ್ಳತನ ಮಾಡಿದ್ದಾರೆ.

ಸದ್ಯ ಖತರ್ನಾಕ್ ಗ್ಯಾಂಗ್ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯದಲ್ಲಿ ಸ್ಥಳೀಯ ಯುವಕರೇ ಈ ಕೃತ್ಯ ಮಾಡುತ್ತಿರುವ ವಿಚಾರ ಗೊತ್ತಾಗಿದೆ. ಸದ್ಯ ಸಿಸಿಟಿವಿ ಆಧಾರದ ಮೇಲೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ಮುಂದುವರೆಸಿದ್ದಾರೆ.