ಬೆಂಗಳೂರು: ಕೊರೊನಾ ತಡೆಯಲು ಹೇರಿದ್ದ ಲಾಕ್ಡೌನ್ ಸಡಿಲಿಕೆಯಾದ ಬಳಿಕ ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ. ಈಗ ಶಾಪಿಂಗ್ ಕಾಂಪ್ಲೆಕ್ಸ್ ಮುಂದೆ ನಿಲ್ಲಿಸಿದ್ದ ಬೈಕನ್ನು ಕೆಲವೇ ನಿಮಿಷದಲ್ಲಿ ಕಳ್ಳನೊಬ್ಬ ಕದ್ದು ಪರಾರಿಯಾಗಿದ್ದಾನೆ.
ಶಾಪಿಂಗ್ ಕಾಂಪ್ಲೆಕ್ಸ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Ramamurinagar Police Station
ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಜೋರಾಗಿದ್ದು, ಶಾಪಿಂಗ್ ಮಾಲ್ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ಕಳ್ಳ ಪರಾರಿಯಾಗಿದ್ದಾನೆ.
ಬೈಕ್ ಕಳ್ಳತನ
ಸತೀಶ್ ಎಂಬುವವರು ಮಧ್ಯಾಹ್ನ 2.20ರ ಸುಮಾರಿಗೆ ರಾಮಮೂರ್ತಿ ನಗರದ ಪೀಟರ್ ಇಂಗ್ಲೆಡ್ ಶೋ ರೂಂ ಬಳಿ ಬೈಕ್ ನಿಲ್ಲಿಸಿ ಶಾಪಿಂಗ್ ಮಾಡಲು ತೆರಳಿದ್ದಾರೆ. ಸತೀಶ್ ಶಾಪಿಂಗ್ ಮುಗಿಸಿ ಬಂದು ನೋಡಿದ್ರೆ ಬೈಕ್ ನಾಪತ್ತೆಯಾಗಿದೆ. ಮೊದಲು ಪೊಲೀಸರು ತೆಗೆದುಕೊಂಡು ಹೋಗಿರಬಹುದು ಎಂದುಕೊಂಡು ಸಿಸಿಟಿವಿ ಪರಿಶೀಲಿಸಿದಾಗ ಬೈಕ್ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.
ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ತನಿಖೆ ಮುಂದುವರೆಸಿದ್ದಾರೆ.