ಕರ್ನಾಟಕ

karnataka

ETV Bharat / state

ಕ್ಷಣಮಾತ್ರದಲ್ಲಿ ಬೈಕ್​ ಎಗರಿಸಿದ ಕಳ್ಳರು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - Bike thieves at Eejipura of vivekanagara

ಸಾಯಿ ಕೃಷ್ಣ ಎಂಬುವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಬಂದು ಮನೆಯ ಬಳಿ ತಮ್ಮ ಬೈಕ್ ಪಾರ್ಕಿಂಗ್​ ಮಾಡಿದ್ದಾರೆ. ಇದನ್ನು ಟಾರ್ಗೆಟ್​ ಮಾಡಿದ ಇಬ್ಬರು ಯುವಕರು,  ಕ್ಷಣಮಾತ್ರದಲ್ಲಿಯೇ ಆ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳತನ , Bike theft in  Bangalore
ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳತನ

By

Published : Dec 4, 2019, 9:27 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳರ ಹಾವಳಿ ಮತ್ತೆ ಮುಂದುವರೆದಿದೆ. ಸಾಯಿ ಕೃಷ್ಣ ಎಂಬುವರ ಟಿವಿಎಸ್ ಸ್ಟಾರ್ ಬೈಕ್​ನ ಲಾಕ್ ಅ​ನ್ನು ಕ್ಷಣಾರ್ಧದಲ್ಲಿ ಮುರಿದು ಬೈಕ್ ಕದ್ದಿರುವ ಘಟನೆ ವಿವೇಕನಗರದ ಈಜಿಪುರದಲ್ಲಿ ನಡೆದಿದೆ.

ಸಾಯಿ ಕೃಷ್ಣ ಅವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಬಂದು ಮನೆಯ ಬಳಿ ತಮ್ಮ ಬೈಕ್ ಪಾರ್ಕಿಂಗ್​ ಮಾಡಿದ್ದಾರೆ. ಇದನ್ನು ಟಾರ್ಗೆಟ್​ ಮಾಡಿದ ಇಬ್ಬರು ಯುವಕರು, ಕ್ಷಣಮಾತ್ರದಲ್ಲಿಯೇ ಆ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ. ವಿಚಿತ್ರ ಎಂದರೆ ಈ ಇಬ್ಬರೂ ಕಳ್ಳರು ಶೂ ಹಾಕಿ ನಡೆದರೆ ಶಬ್ದ ಬರುತ್ತದೆ ಎಂದು ಅರಿತು ಅವುಗಳನ್ನು ಕೈನಲ್ಲೇ ಹಿಡಿದುಕೊಂಡು ವಿವೇಕನಗರದ ಏರಿಯಾ ಪೂರ್ತಿ ತಿರುಗಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳತನ

ಈ ಇಬ್ಬರ ಖತರ್ನಾಕ್ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಯಿ ಕೃಷ್ಣ ಅವರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ABOUT THE AUTHOR

...view details