ಬೆಂಗಳೂರು:ಮಾಗಡಿ ರಸ್ತೆ ಪೊಲೀಸರು ಕಾರ್ಯಾಚರಣೆ ನಡೆಸಿ ಪಾರ್ಕಿಂಗ್ನಲ್ಲಿ ನಿಲ್ಲಿಸುವ ಬೈಕ್ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಂಚಿತ್ ಆರ್. ಬಂಧಿತ ಆರೋಪಿಯಾಗಿದ್ದು, ಜನವರಿ 25ರಂದು ಮಾಗಡಿ ರಸ್ತೆ ಹತ್ತಿರ ಮನೆ ಮುಂದೆ ನಿಲ್ಲಿಸಿದ್ದ ಹೊಂಡಾ ಆಕ್ಟಿವಾ ಬೈಕ್ನ್ನು ಕಳ್ಳತನ ಮಾಡಿದ್ದ. ಈ ಘಟನೆ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ರಂಚಿತ್ನನ್ನು ಬಂಧಿಸಿದ್ದಾರೆ.