ಕರ್ನಾಟಕ

karnataka

ETV Bharat / state

ಸಿಲಿಕಾನ್​ ಸಿಟಿಯ ವಿವಿಧೆಡೆ ಕಳವಾಗಿದ್ದ 220 ಬೈಕ್‌ಗಳು ವಶ: ಆರೋಪಿಗಳ ಬಂಧನ - accused are arrested

ಬೆಂಗಳೂರಿನ ವಿವಿಧ ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ಬೈಕ್​ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಸತೀಶ, ಮಣಿಕಂಠ ಬಂಧಿತ ಆರೋಪಿಗಳು
ಸತೀಶ, ಮಣಿಕಂಠ ಬಂಧಿತ ಆರೋಪಿಗಳು

By

Published : Oct 13, 2020, 10:05 AM IST

ಬೆಂಗಳೂರು: ರಾತ್ರಿ ವೇಳೆಯಲ್ಲಿ ಬೆಲೆ ಬಾಳುವ ಮೋಟರ್ ಸೈಕಲ್​ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸತೀಶ, ಮಣಿಕಂಠ ಬಂಧಿತ ಆರೋಪಿಗಳು. ಈ ಆರೋಪಿಗಳು ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರೊನಾ ಲಾಕ್​ಡೌನ್ ಸಂದರ್ಭ ಬೈಕ್ ಕಳ್ಳತನ ಮಾಡುತ್ತಿದ್ದರು. ಈ ಮಾಹಿತಿ ತಿಳಿದ ಠಾಣಾ ಇನ್ಸ್‌ಪೆಕ್ಟರ್‌​ ನೇತೃತ್ವದ ತಂಡ ಆರೋಪಿಗಳಿಗೆ ಶೋಧ ಮುಂದುವರೆಸಿದ್ದಾರೆ.

ಬಂಧಿತ ಆರೋಪಿಗಳಾದ ಸತೀಶ ಮತ್ತು ಮಣಿಕಂಠ

ಆರೋಪಿಗಳಿಂದ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವಾದ ಆಕ್ಸಿಸ್ ವಾಹನ, ಮೋಟಾರ್ ಸೈಕಲ್, ಮೈಕೊ ಲೇಔಟ್ ಪೊಲೀಸ್ ಠಾಣೆಯ ಹೊಂಡಾ ಡಿಯೋ, ಹುಳಿಮಾವ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಡಾ ಡಿಯೋ ವಾಹನ, ಜೆ.ಪಿ. ನಗರ ಪೊಲೀಸ್ ಠಾಣೆಯಲ್ಲಿ ಕಳವಾದ ಎರಡು ಹೊಂಡಾ ಡಿಯೋ, ನಂದಿನಿ ಲೇಔಟ್ ಪೊಲೀಸ್ ಠಾಣೆಯ ಹೊಂಡಾ ಡಿಯೋ, ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಯಮಹ ಆರ್.ಎಕ್ಸ್, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಬಜಾಜ್ ಪಲ್ಸರ್ 220, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಹೊಂಡಾ ಡಿಯೋ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಬಜಾಜ್ ಪಲ್ಸರ್ ಸೇರಿದಂತೆ 220 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details