ಬೆಂಗಳೂರು:ಕಳೆದ ಅಗಸ್ಟ್ 8ರ ರಾತ್ರಿ ಅಪಘಾತವೊಂದು ನಡೆದಿತ್ತು. ಆಗ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಆತನ ಬೈಕ್ ಎಗರಿಸಿದ್ದ ಕಳ್ಳನೋರ್ವನನ್ನು ಈಗ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಬಾಲಾಜಿ ಎಂಬುವರು ಅಗಸ್ಟ್ 8ರ ರಾತ್ರಿ 9:30ರ ಸುಮಾರಿಗೆ ಜಯನಗರದ ಬಳಿ ಬರುತ್ತಿದ್ದರು. ಈ ವೇಳೆ ತಮ್ಮ ಸುಜುಕಿ ಜಿಕ್ಸರ್ ಬೈಕ್‌ನಿಂದ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದಿದ್ದಾರೆ. ಈ ವೇಳೆ ಗಾಯಾಳು ಬಾಲಾಜಿಗೆ ಸಹಾಯ ಮಾಡುವ ನೆಪದಲ್ಲಿ ಆರೋಪಿ ಸಿರಾಜ್ ಬಂದಿದ್ದಾನೆ. ಬಾಲಾಜಿಯವರನ್ನ ಬೈಕ್‌ನ ಹಿಂಬದಿ ಕೂರಿಸಿಕೊಂಡು ಜಯನಗರದ ಆರ್ಥೊಪೆಡಿಕ್ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ವೈದ್ಯರು ಚಿಕಿತ್ಸೆ ನೀಡುವ ವೇಳೆ, ನೀವು ಚಿಕಿತ್ಸೆ ಪಡೆದುಕೊಳ್ಳಿ, ಬೈಕ್ ಸೈಡಿಗೆ ಪಾರ್ಕ್ ಮಾಡ್ತೀನಿ ಅಂತಾ ಬೈಕ್ ಕೀ ಪಡೆದಿದ್ದಾನೆ. ನಂತರ ಬಾಲಾಜಿ ಟ್ರೀಟ್ಮೆಂಟ್ ಪಡೆದು ಬರೋ ವೇಳೆಗಾಗಲೇ ಆರೋಪಿ ಸಿರಾಜ್ ಬೈಕ್ ಎಗರಿಸಿಕೊಂಡು ಪರಾರಿಯಾಗಿದ್ದಾನೆ.