ಕರ್ನಾಟಕ

karnataka

ETV Bharat / state

ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು; ಫ್ಲೈ ಓವರ್‌ನಿಂದ ಕೆಳಗೆ ಬಿದ್ದು ಬೈಕ್​ ಸವಾರ ಸಾವು - Bengaluru airport airport flyover accident

ಬೆಂಗಳೂರಿನ ಏರ್​​ಪೋರ್ಟ್ ರಸ್ತೆ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಬೈಕ್​ ಸವಾರ ಸಾವಿಗೀಡಾಗಿದ್ದಾನೆ.

bike-rider-dies-in-bengaluru-airport-flyover-accident
ಬೆಂಗಳೂರಲ್ಲಿ ಭಯಾನಕ ಅಪಘಾತ: ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಬೈಕ್​ ಸವಾರ ಸಾವು

By

Published : May 22, 2022, 11:25 AM IST

Updated : May 22, 2022, 12:05 PM IST

ಬೆಂಗಳೂರು:ನಗರದ ಜಕ್ಕೂರು ಫ್ಲೈ ಓವರ್​ನಲ್ಲಿ ಬೈಕ್​​ಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಓರ್ವ ಮೃತಪಟ್ಟರೆ, ಬಾಲಕ ಗಂಭೀರ ಗಾಯಗೊಂಡಿರುವ ಘಟನೆ ಭಾನುವಾರ(ಇಂದು) ಬೆಳಗ್ಗೆ ಸಂಭವಿಸಿದೆ.‌

ಬೆಂಗಳೂರಿನ ಜಕ್ಕೂರು ನಿವಾಸಿ ಗೋವಿಂದಪ್ಪ ಮೃತ ವ್ಯಕ್ತಿ. ಮೃತರ ಹೆಂಡತಿ‌ಯ ಸಹೋದರಿಯ ಮಗ ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ 7.15ರ ಸುಮಾರಿಗೆ ಘಟನೆ ನಡೆದಿದೆ. ಯಲಹಂಕ ಠಾಣೆ ಸಂಚಾರಿ ಪೊಲೀಸರು ಕಾರು ಚಾಲಕ ವರುಣ್​ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ‌.

ಫ್ಲೈ ಓವರ್‌

ಗೋವಿಂದಪ್ಪ ಬಾಲಕ ಸಂಜಯ್​ಗೆ ಜಕ್ಕೂರು ಏರೋಡ್ರಮ್​ನಲ್ಲಿರುವ ವಿಮಾನಗಳನ್ನು ತೋರಿಸಲು ಮೊಪೆಡ್ ಗಾಡಿಯಲ್ಲಿ ಹೊರಟಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಬೈಕಿಗೆ ಗುದ್ದಿದೆ. ಅಪಘಾತ ರಭಸಕ್ಕೆ ಗೋವಿಂದಪ್ಪ ಫ್ಲೈ ಓವರ್​ನಿಂದ ಕೆಳಗೆ ಬಿದ್ದಿದ್ದಾರೆ. ತಲೆ ಹಾಗೂ ದೇಹಕ್ಕೆ ತೀವ್ರ ಗಾಯಗೊಂಡು ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದಲ್ಲದೆ, ಅಪಘಾತದ ಬಳಿಕ ಪರಾರಿಯಾಗಿದ್ದ ಚಾಲಕ ವರುಣ್​ನನ್ನು ಕೆ.ಆರ್‌ ಪುರಂ ಬಳಿ ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ನಾಲ್ಕೈದು ಜನರಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಗೋವಾದಲ್ಲಿ ಭೀಕರ ಅಪಘಾತ: ಬೆಳಗಾವಿಯ ಮೂವರು ಯುವಕರ ದುರ್ಮರಣ

Last Updated : May 22, 2022, 12:05 PM IST

ABOUT THE AUTHOR

...view details