ಬೆಂಗಳೂರು: ರಸ್ತೆಯಲ್ಲಿ ಬೈಕ್ ಸವಾರ ತನ್ನ ಕಾರಿಗೆ ಬೈಕ್ ತಾಗಿಸಿದ್ದಾನೆ ಎಂದು ಸಿಟ್ಟಿಗೆದ್ದ ಔಡಿ ಕಾರು ಚಾಲಕ ಬೈಕ್ ಸವಾರನ ಕಡೆ ಎರಡು ಸುತ್ತು ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಯಶವಂತಪುರ ಠಾಣಾ ವ್ಯಾಪ್ತಿಯ ಎಂ.ಎಸ್.ರಾಮಯ್ಯ ಆಸ್ಪತ್ರೆ ಹಿಂಬದಿಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾರಿಗೆ ಬೈಕ್ ತಾಗಿಸಿದ ನೆಪದಲ್ಲಿ ಬೈಕ್ ಸವಾರ ಅನಿಲ್ ಎಂಬವರ ಜೊತೆ ಕಾರು ಚಾಲಕ ಗಲಾಟೆ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ಕಾರು ಚಾಲಕ ಪಿಸ್ತೂಲು ತೆಗೆದು ಅನಿಲ್ ಕಡೆ ಗುಂಡು ಹಾರಿಸಿದ್ದಾನೆ. ಆದರೆ ಎರಡು ಗುಂಡುಗಳು ಅನಿಲ್ಗೆ ತಗುಲಿಲ್ಲ. ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.