ಕರ್ನಾಟಕ

karnataka

ETV Bharat / state

ಮೈಸೂರು ರಸ್ತೆಯಲ್ಲಿ ಕೆಸರೋ ಕೆಸರು... ಜಾರಿ ಬಿದ್ದ ಬೈಕ್​ ಸವಾರರು - Traffic cops

ಮೈಸೂರು‌ ರಸ್ತೆ ಮೇಲ್ಸೇತುವೆ ರಸ್ತೆ ಬಳಿ ಎಂದಿನಂತೆ ಇಂದೂ ಸಹ ಬೈಕ್​ ಚಲಾಯಿಸಿದ ಸವಾರರು, ರಸ್ತೆಯಲ್ಲಿ ಕೆಸರು ಇರುವುದನ್ನು ಗಮನಿಸದೇ ಏಕಾಏಕಿ ಬೈಕ್​ನಿಂದ ಬಿದ್ದು ಗಾಯಗೊಂಡಿದ್ದಾರೆ.

bike-rider-caught-in-the-mud

By

Published : Aug 7, 2019, 6:27 PM IST

ಬೆಂಗಳೂರು: ಮೈಸೂರು ರಸ್ತೆಯ ಮೇಲ್ಸೇತುವೆ ಕೆಳಗೆ ಕೆಸರಿನಿಂದ ಏಕಾಏಕಿ ಏಳೆಂಟು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಕೆಸರಿನಿಂದ ಜಾರಿ ಬಿದ್ದ ಬೈಕ್ ಸವಾರರು

ಮೈಸೂರು‌ ರಸ್ತೆ ಮೇಲ್ಸೇತುವೆ ರಸ್ತೆ ಬಳಿ ಎಂದಿನಂತೆ ಬೈಕ್ ಸವಾರರು ಹೋಗಿದ್ದಾರೆ. ಕೆಸರು ಇರುವುದನ್ನು ಅರಿಯದ ಬೈಕ್ ಸವಾರರು ನೋಡು ನೋಡುತ್ತಿದ್ದಂತೆ ಜಾರಿ ಬಿದ್ದಿದ್ದಾರೆ‌. ಇದೇ ರೀತಿ ಏಳೆಂಟು ಬೈಕ್ ಸವಾರರು ಬಿದ್ದಿದ್ದಾರೆ.‌ ಈ ಸಂಬಂಧ ಸಂಚಾರಿ ಪೊಲೀಸರು ಸ್ಥಳದಲ್ಲಿ ಬ್ಯಾರಿಗೇಟ್ ಹಾಕಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.

ಈ ಬಗ್ಗೆ ಸಿಟಿ ಮಾರ್ಕೆಟ್ ಇನ್​ಸ್ಪೆಕ್ಟರ್ ಮಾತನಾಡಿ, ಸಮೀಪದಲ್ಲೇ ಮಾರುಕಟ್ಟೆಯಲ್ಲಿ ಕೊತ್ತಂಬರಿ ಮಾರಾಟದ ಜಾಗವಿದ್ದು, ಇಲ್ಲಿಗೆ ಬರುವ ವಾಹನಗಳಿಂದಾಗುವ ಗಲೀಜು ಹಾಗೂ ಮಳೆ ಬಿದ್ದಿದ್ದರಿಂದ ರಸ್ತೆಯು‌ ಕೆಸರಿನಂತಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details