ಕರ್ನಾಟಕ

karnataka

ETV Bharat / state

ಬೆಂಗಳೂರು: ನವದಂಪತಿ ಆತ್ಮಹತ್ಯೆ, ಕರೆಂಟ್​ ಬಿಲ್​ ಕೊಡಲು ಹೋದ ಮಾಲೀಕನಿಗೆ ಶಾಕ್​ - couple suicide in Bangalore

ಶುಕ್ರವಾರ ಸಂಜೆ ಬಾಡಿಗೆ ಪಡೆದಿದ್ದ ಮನೆ ಮಾಲೀಕ ವಿದ್ಯುತ್ ಬಿಲ್ ನೀಡಲು ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಶ್ರೀರಾಂಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಘಟನಾವಿದ್ಯುತ್​ ಬಿಲ್​ ನೀಡಲು ತೆರಳಿದ ಸಂದರ್ಭದಲ್ಲಿ ದಂಪತಿ ಸಾವಿನ ಸುದ್ದಿ ತಿಳಿದುಬಂದಿದೆ. ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಸಾವನ್ನಪ್ಪಿದ್ದರೆ, ಗಂಡ ರಾಹುಲ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ದಂಪತಿ ಆತ್ಮಹತ್ಯೆ
ದಂಪತಿ ಆತ್ಮಹತ್ಯೆ

By

Published : May 2, 2020, 8:43 AM IST

ಬೆಂಗಳೂರು:ರಾಜಧಾನಿಯಲ್ಲಿ ಬಿಹಾರ ಮೂಲದ ನವ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ಡಾರೆ.

ರಾಹುಲ್ (30) ಮತ್ತು ರಾಣಿ(26) ಆತ್ಮಹತ್ಯೆಗೆ ಶರಣಾದ ದಂಪತಿ. ಶ್ರೀರಾಂಪುರದ ದಯಾನಂದ ರಸ್ತೆಯ ಮನೆಯೊಂದರಲ್ಲಿ‌ ಈ ಘಟನೆ ನಡೆದಿದೆ. ದಯಾನಂದ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ದಂಪತಿಯು ಬಿಹಾರ ಮೂಲದವರಾಗಿದ್ದು ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದರು.

ವಿದ್ಯುತ್​ ಬಿಲ್​ ನೀಡಲು ತೆರಳಿದ ಸಂದರ್ಭದಲ್ಲಿ ದಂಪತಿ ಸಾವಿನ ಸುದ್ದಿ ತಿಳಿದುಬಂದಿದೆ. ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಸಾವನ್ನಪ್ಪಿದ್ದರೆ, ಗಂಡ ರಾಹುಲ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ಸಂಜೆ ಬಾಡಿಗೆ ಪಡೆದಿದ್ದ ಮನೆ ಮಾಲೀಕ ವಿದ್ಯುತ್ ಬಿಲ್ ನೀಡಲು ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಶ್ರೀರಾಂ​ಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details