ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಶೆಡ್ ಗೋಡೆ ಕುಸಿದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ.
ಬೆಂಗಳೂರು: ಮಳೆಗೆ ಶೆಡ್ ಕುಸಿದು ಬಿಹಾರ ಮೂಲದ ಕಾರ್ಮಿಕ ಸಾವು - Heavy rain in Bengaluru
ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಶೆಡ್ ಕುಸಿದು ಬಿದ್ದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿರುವ ಘಟನೆ ನಡೆದಿದೆ.
![ಬೆಂಗಳೂರು: ಮಳೆಗೆ ಶೆಡ್ ಕುಸಿದು ಬಿಹಾರ ಮೂಲದ ಕಾರ್ಮಿಕ ಸಾವು dsd](https://etvbharatimages.akamaized.net/etvbharat/prod-images/768-512-9449434-thumbnail-3x2-vish.jpg)
ಮಳೆಗೆ ಶೆಡ್ ಕುಸಿದು ಬಿಹಾರ ಮೂಲದ ಕಾರ್ಮಿಕ ಸಾವು
ಮಳೆಗೆ ಶೆಡ್ ಕುಸಿದು ಬಿಹಾರ ಮೂಲದ ಕಾರ್ಮಿಕ ಸಾವು
ಪೂರಂಪೂಜಾರಿ(19 ) ಮೃತ ದುರ್ದೈವಿ. ಇಸ್ಕಾನ್ ಎದುರುಗಡೆ ನಿರ್ಮಿಸುತ್ತಿದ್ದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಈತ ರಾತ್ರಿ ತಗಡಿನ ಶೆಡ್ನಲ್ಲಿ ಮಲಗಿದ್ದ. ಈ ವೇಳೆ, ಜೋರಾಗಿ ಗಾಳಿಮಳೆ ಬಂದ ಪರಿಣಾಮ ಈ ದುರಂತ ನಡೆದಿದೆ.
ಇನ್ನಿಬ್ಬರು ಕಾರ್ಮಿಕರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೆಡ್ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.