ಕರ್ನಾಟಕ

karnataka

ETV Bharat / state

ರಾಬರ್ಟ್ ಸಿನೆಮಾ ನಿರ್ಮಾಪಕ ಉಮಾಪತಿ‌ ಕೊಲೆ ಸ್ಕೆಚ್ ಕೇಸ್​​ಗೆ ಬಿಗ್ ಟ್ವಿಸ್ಟ್ ..! - Robert Cinema Producer Umapati Murder Sketch Case

ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ‌ ಕೊಲೆ ಸ್ಕೆಚ್ ಕೇಸ್​​ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

banglore
ಕೊಲೆ ಸ್ಕೇಚ್ ಕೇಸ್​​ಗೆ ಬಿಗ್ ಟ್ವಿಸ್ಟ್

By

Published : Jan 4, 2021, 11:44 AM IST

ಬೆಂಗಳೂರು:ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ‌ ಕೊಲೆ ಸ್ಕೆಚ್ ಕೇಸ್​​ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊನೆಗೂ ಮಾಸ್ಟರ್​​ಮೈಂಡ್ ಬಾಂಬೆ ರವಿ ಸುಳಿವನ್ನು ಪೊಲೀಸರು ತಾಂತ್ರಿಕ ಸಾಕ್ಷಾಧಾರಗಳ ಮೂಲಕ ಪತ್ತೆ ಮಾಡಿದ್ದಾರೆ.

ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ‌ ಹತ್ಯೆ ಮಾಡುವುದಾಗಿ ವಿದೇಶದಿಂದ ಕರೆ ಬಂದಿತ್ತು. ಬಾಂಬೆ ರವಿ, ಉಮಾಪತಿ ಹತ್ಯೆಗೆ ಸ್ಕೆಚ್ ಹಾಕಿ ವಿದೇಶದಿಂದ ಕರೆ ಬರುವ ರೀತಿ ಸಾಫ್ಟ್‌ವೇರ್ ಮ್ಯಾನಿಪ್ಯುಲೇಟ್ ಮಾಡಿ, ನಿರ್ಮಾಪಕ ಉಮಾಪತಿ ಸೇರಿ ಅವರ ಸಹೋದರನಿಗೆ ಕೂಡ ಧಮ್ಕಿ ಹಾಕಿದ್ದ. ಸಂಜಯ್ ನಗರ ಪೊಲೀಸರು ಇತ್ತೀಚೆಗೆ ಬಾರ್​​ನಲ್ಲಿ ಕುಡಿದು ಮಾತನಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ತನಿಖೆ ಮಾಡುತ್ತಿದ್ದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.‌ ಬನ್ನಂಜೆ ರಾಜ ಜೈಲು ಸೇರಿದ ನಂತರ ಆ್ಯಕ್ಟಿವ್ ಆಗೋಕೆ ಬಾಂಬೆ ರವಿ ಪ್ರಯತ್ನ ಮಾಡುತ್ತಿದ್ದು, ತನ್ನ ಹುಡುಗರನ್ನು ಕಳುಹಿಸಿ ಫೋನ್ ಮೂಲಕ ಹಲವರಿಗೆ ಧಮ್ಕಿ ಹಾಕುವ ಪ್ರಯತ್ನ ಪಡುತ್ತಿದ್ದಾನೆ.

ಇದನ್ನೂ ಓದಿ:'ರಾಬರ್ಟ್' ಚಿತ್ರ​​​ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್, ಆರೋಪಿಗಳು ವಶಕ್ಕೆ

ಈ ಎಲ್ಲಾ ಮಾಹಿತಿ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಹಾಗೂ ಸಹೋದರನ ಕೊಲೆಯ ಪ್ಲಾನ್ ಬಗ್ಗೆ ತನಿಖೆ ಮಾಡಿದಾಗ ಬೆಳಕಿಗೆ ಬಂದಿದೆ. ಇನ್ನಷ್ಟು ತನಿಖೆಯನ್ನು ಬೆಂಗಳೂರು ಪೊಲೀಸರು ‌ಮುಂದುವರೆಸಿದ್ದಾರೆ.

ABOUT THE AUTHOR

...view details