ಕರ್ನಾಟಕ

karnataka

ETV Bharat / state

ಸೀಜ್ ಆಗಿದ್ದ ವಾಹನಗಳು ಇಂದು ಸಿಗುತ್ತೆ ಅಂತಿದ್ದ ಸವಾರರಿಗೆ ಬಿಗ್ ಶಾಕ್!

ಜಪ್ತಿಯಾದ ವಾಹನಗಳು ಇಂದು ಸಿಗುತ್ತವೆ ಎಂದು ತಿಳಿದಿದ್ದ ವಾಹನ ಸವಾರರಿಗೆ ಶಾಕ್ ಆಗಿದೆ. ಲಾಕ್ ಡೌನ್ ಮುಗಿಯದೇ ವಾಹನ ವಾಪಸ್ ನೀಡುವುದಿಲ್ಲ ಅನ್ನುವುದು ಸ್ಪಷ್ಟವಾಗಿದೆ.

police
police

By

Published : Apr 14, 2020, 2:45 PM IST

ಬೆಂಗಳೂರು: ಲಾಕ್​​​ಡೌನ್ ಬ್ರೇಕ್ ಮಾಡಿ ವಿನಾ ಕಾರಣ ಓಡಾಟ ಮಾಡುವ ವಾಹನಗಳನ್ನ ಜಪ್ತಿ ಮಾಡಿ ಪೊಲೀಸರು ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದರು.

ಜಪ್ತಿಯಾದ ವಾಹನಗಳನ್ನು ಇಂದು ವಾಪಸ್ ನೀಡಲಾಗುತ್ತದೆ ಎಂದು ಕೂಡ ವಾಹನ ಸವಾರರಿಗೆ ತಿಳಿಸಿದ್ದರು. ವಾಹನ ಸವಾರರು ಕೂಡಾ ಇಂದು‌ ಲಾಕ್​​​​​​​ಡೌನ್ ಮುಕ್ತಾಯವಾಗುತ್ತೆ ಅನ್ನವು ಗುಂಗಿನಲ್ಲಿ ಇದ್ರು.

ಆದರೆ, ಇಂದು ಪ್ರಧಾನಿ ಮೋದಿ ಲಾಕೌಡೌನ್ ಮುಂದುವರೆಸಿದ ಕಾರಣ ವಾಹನ ಮಾಲೀಕರಿಗೆ ಬಿಗ್ ಶಾಕ್ ಕಾದಿದೆ. ಈಗ ಲಾಕ್ ಡೌನ್ ಮುಂದುವರೆದಿದ್ದು, ಸೀಜ್ ಮಾಡಿದ ವಾಹನಗಳು ಸದ್ಯಕ್ಕೆ ಸಿಗಲ್ಲ ಅನ್ನೋದು ಸ್ಪಷ್ಟವಾಗಿದೆ.

ನಗರದಲ್ಲಿ ಈಗಾಗಲೇ 29,500 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಅದರಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಕಾರುಗಳು‌ ಇವೆ. ಸೀಜ್ ಆಗಿರೋ ವಾಹನಗಳ ಪೈಕಿ ಸುಮಾರು 10 ಸಾವಿರ ವಾಹನಗಳಿಗೆ ದಾಖಲೆಗಳೇ ಇಲ್ಲ. ಈಗ ದಾಖಲೆಗಳು ಇಲ್ಲದೇ ಇರೋ ವಾಹನಗಳು ಮಾಲಿಕರ ಕೈಗೆ ಸೇರೋದೇ ಡೌಟ್ ಆಗಿದೆ.

ಯಾಕಂದ್ರೆ ಪೊಲಿಸರು 29,500 ವಾಹನಗಳ ಮೇಲೆ NDMA ರಾಷ್ಟ್ರೀಯ ವಿಪತ್ತು ನಿರ್ವಹಣಾ ಆ್ಯಕ್ಟ್ ಹಾಗೂ 96 ಕರ್ನಾಟಕ ಪೊಲೀಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

ಒಂದು ವೇಳೆ, ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ರೆ, ಗಾಡಿ ಮಾಲೀಕರು ಸರಿಯಾದ ಡಾಕ್ಯುಮೆಂಟ್ ಕೊಟ್ಟು ದಂಡ ಕಟ್ಟಿ ವಾಹನ ಪಡೆಯಬಹುದು. ಒಂದು ವೇಳೆ, ದಾಖಲೆ ಇಲ್ಲ ಅಂದ್ರೆ ವಾಹನಗಳನ್ನು ವಾಪಸ್ ಪಡೆಯಲಾಗುವುದಿಲ್ಲ.

ABOUT THE AUTHOR

...view details