ಬೆಂಗಳೂರು: ಸಾರಿಗೆ ಇಲಾಖೆಯ ನಿಯಮಗಳನ್ನ ಗಾಳಿಗೆ ತೂರಿದ ಓಲಾ ಕಂಪನಿ ಲೈಸೆನ್ಸ್ ರದ್ದು ಮಾಡಿ ಸಾರಿಗೆ ಇಲಾಖೆ, ನಿಯಮಗಳನ್ನು ಉಲ್ಲಂಘಿಸುವ ಕಂಪನಿ ಮತ್ತು ಟ್ರಾವೆಲ್ಸ್ಗಳಿಗೆ ಬಿಸಿ ಮುಟ್ಟಿಸಿದೆ.
ಓಲಾ ನೆಚ್ಚಿಕೊಳ್ಳಬೇಡಿ ಕ್ಯಾಬ್ ಸೌಲಭ್ಯ ಇನ್ಮೇಲೆ ನಿಮಗೆ ಸಿಗಲ್ಲ..
ತಕ್ಷಣವೇ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನಿಲ್ಲಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಂದ ಆದೇಶ ಹೊರಡಿಸಿದೆ. ಪ್ರತಿ ನಿತ್ಯ ಕ್ಯಾಬ್ ಮೂಲಕ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಿಗೆ ಇನ್ಮೇಲೆ ಓಲಾ ಲಭ್ಯವಿರಲ್ಲ. ಸಾರಿಗೆ ಇಲಾಖೆ ಈ ಖಾಸಗಿ ಸಾರಿಗೆ ಸಂಸ್ಥೆಗೆ ಕೊಕ್ಕೆ ಹಾಕಿದೆ.
ಉಪಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವರದಿ ಆಧರಿಸಿ ಲೈಸೆನ್ಸ್ ರದ್ದು ಪಡಿಸಿ ಇಲಾಖೆ ಆದೇಶ ಹೊರಡಿಸಲಾಗಿದೆ. ಓಲಾ ಕಂಪನಿಗೆ ಟ್ಯಾಕ್ಸಿ ಸೇವೆ ಒದಗಿಸಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ, ನಿಯಮಗಳನ್ನು ಮೀರಿ ಬೈಕ್ ಸೇವೆ ನೀಡಿತ್ತು. ಓಲಾ ಕಂಪನಿಗೆ ಯಾವುದೇ ಅನುಮತಿ ಇಲ್ಲದೆ, ಕಾನೂನು ಬಾಹಿರವಾಗಿ ಅಗ್ರಿಗೇಟರ್ಸ್ 2016ರ ನಿಯಮದವಿರುದ್ಧವಾಗಿ ದ್ವಿಚಕ್ರ ವಾಹನ ಬಳಕೆ ಮಾಡುತ್ತಿತ್ತು ಎಂಬುದು ಓಲಾ ಕಂಪನಿ ವಿರುದ್ಧದ ಮುಖ್ಯ ಆರೋಪಗಳಲ್ಲಿ ಒಂದು.
ಇದರಿಂದ ತಕ್ಷಣವೇ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನಿಲ್ಲಿಸುವಂತೆ ಆದೇಶ ಮಾಡಿ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ. ಇದರಿಂದ ಸಾವಿರಾರು ಕ್ಯಾಬ್ ಡ್ರೈವರ್ಗಳ ಬದುಕು ಬೀದಿಗೆ ಬೀಳುವಂತಾಗಿದೆ. ಮುಂದಿನ ಆರು ತಿಂಗಳ ಕಾಲ ಉಲಾ ಕ್ಯಾಬ್ ಪರವಾನಿಗೆ ನವೀಕರಣ ಆಗೋದಿಲ್ಲ.