ಕರ್ನಾಟಕ

karnataka

ETV Bharat / state

ಅಕ್ರಮ ಪಡಿತರ ಚೀಟಿ ವಾಪಸಾತಿಗೆ ಗಡುವು​ : ಕ್ರಿಮಿನಲ್ ಮೊಕದ್ದಮೆಯ ಎಚ್ಚರಿಕೆ! - ಅಕ್ರಮ ಪಡಿತರ ಚೀಟಿದಾರರಿಗೆ ಬಿಗ್​ ಶಾಕ್

ರಾಜ್ಯದಲ್ಲಿ ಅಕ್ರಮ ಪಡಿತರ ಚೀಟಿ ಹಾವಳಿಗೆ ಅಂಕುಶ ಹಾಕಲು ಸರ್ಕಾರ ಮುಂದಾಗಿದೆ. ಈಗಾಗಲೇ ಅನುಕೂಲಸ್ಥರು ಬಿಪಿಎಲ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ. ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ.

big-shock-for-illegal-bpl-card-holders
ಅಕ್ರಮ ಪಡಿತರ ಚೀಟಿ ವಾಪಸ್ಸಾತಿಗೆ ಗಡುವು​

By

Published : Mar 8, 2020, 8:19 PM IST

Updated : Mar 8, 2020, 8:25 PM IST

ಬೆಂಗಳೂರು: ಅಕ್ರಮ ಪಡಿತರ ಚೀಟಿ ಹೊಂದಿದವವರು ಏಪ್ರಿಲ್ ತಿಂಗಳೊಳಗೆ ತಮ್ಮ ಪಡಿತರ ಚೀಟಿ ಮರಳಿಸಬೇಕು. ಇಲ್ಲವಾದರೆ ಸರ್ಕಾರ ದಂಡದ ಜೊತೆಗೆ ಕ್ರಿಮಿನಲ್ ಮೊಕದ್ದಮೆಯನ್ನೂ ಹಾಕಲಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

ರಾಜ್ಯದಲ್ಲಿ ಅಕ್ರಮ ಪಡಿತರ ಚೀಟಿ ಹಾವಳಿಗೆ ಅಂಕುಶ ಹಾಕಲು ಸರ್ಕಾರ ಮುಂದಾಗಿದೆ. ಈಗಾಗಲೇ ಅನುಕೂಲಸ್ಥರು ಬಿಪಿಎಲ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ, ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ. ಏಪ್ರಿಲ್ ಒಳಗೆ ಅಕ್ರಮ ಪಡಿತರ ಚೀಟಿ ಹೊಂದಿದವರು ತಮ್ಮ ಕಾರ್ಡನ್ನು ವಾಪಸು ಮಾಡಬೇಕು. ಇಲ್ಲವಾದರೆ ಮೇ ತಿಂಗಳಿಂದ ಅಕ್ರಮ ಪಡಿತರದಾರರಿಗೆ ದಂಡ ವಿಧಿಸಲು ತೀರ್ಮಾನಿಸಿದೆ. ಅದರ ಜೊತೆಗೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ಹಾಕಲು ನಿರ್ಧರಿಸಿದೆ.

ಅಕ್ರಮ ಪಡಿತರ ಚೀಟಿ ವಾಪಸ್ಸಾತಿಗೆ ಗಡುವು​
ಪತ್ತೆಯಾದ ಅಕ್ರಮ ಪಡಿತರ ಚೀಟಿ ಎಷ್ಟು?:ರಾಜ್ಯಾದ್ಯಂತ ಮೇ 2019ರಿಂದ ಈವರೆಗೆ ಸುಮಾರು 63,922 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ. ಈ ಅಕ್ರಮ ಪಡಿತರ ಚೀಟಿಗಳನ್ನು ಈಗಾಗಲೇ ರದ್ದು ಪಡಿಸಲಾಗಿದೆ. ಈ ಪೈಕಿ ಅತಿ ಹೆಚ್ಚು ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಯಾಗಿರುವುದು ಬೆಂಗಳೂರು ನಗರದಲ್ಲೇ.. ಬೆಂಗಳೂರು ನಗರದಲ್ಲಿ 8308 ಅಕ್ರಮ ಪಡಿತರ ಚೀಟಿ ರದ್ದು ಪಡಿಸಲಾಗಿದೆ. ಇನ್ನು ವಿಜಯಪುದಲ್ಲಿ 6297 ಅಕ್ರಮ ಪಡಿತರವನ್ನು ರದ್ದುಪಡಿಸಲಾಗಿದೆ. ಇನ್ನುಳಿದಂತೆ ಚಿಕ್ಕಬಳ್ಳಾಪುರದಲ್ಲಿ, ಹಾಸನ, ಕೋಲಾರ, ಹಾವೇರಿ, ಶಿವಮೊಗ್ಗ, ಧಾರವಾಡ , ಬಳ್ಳಾರಿ, ಕಲಬುರ್ಗಿ, ಮೈಸೂರು, ಬೆಳಗಾವಿ, ಮಂಡ್ಯದಲ್ಲಿ ಕೂಡ ಅಕ್ರಮ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ, ರದ್ದು ಪಡಿಸಲಾಗಿದೆ.
ಈವರೆಗೆ ಇ-ಕೆವೈಸಿ ಆಗಿದ್ದೆಷ್ಟು?:ಅಕ್ರಮ ಪಡಿತರ ಚೀಟಿ ಪತ್ತೆಗಾಗಿ ಈಗಾಗಲೇ ಸರ್ಕಾರ ಆಧಾರ್ ಜೋಡಿಸುವ ಇ-ಕೆವೈಸಿ ನೋಂದಣೆ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿ ಇ-ಕೆವೈಸಿ ನೋಂದಣಿ ಪ್ರಕ್ರಿಯೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Last Updated : Mar 8, 2020, 8:25 PM IST

ABOUT THE AUTHOR

...view details