ಬೆಂಗಳೂರು: ಬಿಗ್‌ಬಾಸ್ ರಿಯಾಲಿಟಿ ಶೋ ಜನಪ್ರಿಯತೆಯ ಆ್ಯಡಂ ಪಾಷನನ್ನು ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಬಂಧಿಸಲಾಗಿದ್ದು, ನಿನ್ನೆ ಜೈಲಿಗೆ ಕಳುಹಿಸಿದಾಗ ಹೈಡ್ರಾಮ ನಡೆದಿದೆ.
ಸ್ಯಾಂಡಲ್ವುಡ್ ಡ್ರಗ್ ಪ್ರಕರಣ: ಆ್ಯಡಂ ಪಾಷಾ ಗಂಡೋ, ಹೆಣ್ಣೋ? ಜೈಲಾಧಿಕಾರಿಗಳಲ್ಲಿ ಗೊಂದಲ ಆ್ಯಡಂ ಪಾಷನನ್ನು ಜೈಲಿಗೆ ಕರೆತಂದ ಅಧಿಕಾರಿಗಳು, ಆತನನ್ನು ಪುರುಷ ಅಥವಾ ಮಹಿಳಾ ಸೆಲ್ಗೆ ಹಾಕಬೇಕೋ ಎಂದು ಕೆಲಕಾಲ ತಲೆಕೆಡಿಸಿಕೊಂಡರಂತೆ. ಪಾಷ, ಗಂಡೋ ಅಥವಾ ಹೆಣ್ಣೋ ಎಂಬ ಕನ್ಫ್ಯೂಶನ್ ಅಧಿಕಾರಿಗಳಲ್ಲಿತ್ತಂತೆ. ಆರೋಪಿ ಹೆಣ್ಣಿನ ವಸ್ತ್ರ ಧರಿಸುತ್ತಿದ್ದರಿಂದ ಅಧಿಕಾರಿಗಳು ಗೊಂದಲಕ್ಕೀಡಾಗಲು ಕಾರಣವಾಗಿತ್ತು.
ಈ ವೇಳೆ ಸ್ಪಷ್ಟನೆ ನೀಡಿದ ಆ್ಯಡಂ, 'ನಾನು ಗಂಡು, ಲಿಂಗ ಪರಿವರ್ತನೆಯಾಗಿಲ್ಲ. ಆದರೆ ಯುವತಿಯರ ವಸ್ತ್ರಗಳ ಧರಿಸುತ್ತೇನೆ ಅಷ್ಟೇ. ನಾನೊಬ್ಬ ಡ್ರ್ಯಾಗ್ ಕ್ವೀನ್ ಆಗಿರುವುದು ಇದಕ್ಕೆ ಕಾರಣ' ಎಂದಿದ್ದನಂತೆ. ಬಳಿಕ ಆ್ಯಡಂ ಪಾಷಾನನ್ನು ಜೈಲಾಧಿಕಾರಿಗಳು ಪ್ರತ್ಯೇಕ ಸೆಲ್ಗೆ ಹಾಕಿರುವುದಾಗಿ ಮೂಲಗಳು ತಿಳಿಸಿವೆ.
ಎನ್‌ಸಿಬಿ ಅಧಿಕಾರಿಗಳಿಂದ ಬಂಧಿಸಲ್ಪಿಟ್ಟಿರುವ ಈತ ಡ್ರಗ್ಸ್ ಫೆಡ್ಲರ್ಗಳಿಂದ ಹಲವು ಬಾರಿ ಡ್ರಗ್ಸ್ ಖರೀದಿಸಿ ಸೇವನೆ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಇದೇ ಆರೋಪದಡಿ ಈತನನ್ನು ಮಂಗಳವಾರ ಅರೆಸ್ಟ್ ಮಾಡಲಾಗಿತ್ತು. ಆರೋಪಿಗೆ ನವೆಂಬರ್ 3 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.