ಬೆಂಗಳೂರು: ಕರ್ಫ್ಯೂ ಹಿನ್ನಲೆ, ವಾಹನ ಮತ್ತು ಸಾರ್ವಜನಿಕರ ಸಂಚಾರವಿಲ್ಲದೇ ರಸ್ತೆಗಳು ಖಾಲಿ-ಖಾಲಿಯಾಗಿದ್ದು, ಬಿಡಾಡಿ ದನಗಳ ದರ್ಬಾರ್ ಜೋರಾಗಿತ್ತು.
ಕರ್ಫ್ಯೂ ಹಿನ್ನಲೆ ಖಾಲಿ ರೋಡಿನಲ್ಲಿ ನೆಮ್ಮದಿಯಾಗಿ ನಿದ್ರಿಸಿದ ಬಿಡಾಡಿ ದನಗಳು - ಸಿಲಿಕಾನ್ ಸಿಟಿ
ಕರ್ಫ್ಯೂ ಹಿನ್ನಲೆ, ಇಡೀ ರಾಜ್ಯವೇ ಸ್ತಬ್ಧವಾಗಿದೆ. ಸಿಲಿಕಾನ್ ಸಿಟಿ ಸಂಪೂರ್ಣ ಬಂದ್ ಆಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ. ಪರಿಣಾಮ, ಖಾಲಿ ರಸ್ತೆಗಳಲ್ಲಿ ಬಿಡಾಡಿ ದನಗಳ ದರ್ಬಾರ್ ಜೋರಾಗಿಯೇ ಇದೆ.
ಹೌದು, ಇಡೀ ರಾಜ್ಯವಿಂದು ಸ್ತಬ್ಧವಾಗಿದೆ. ನಾಲ್ಕನೇ ಹಂತದ ಲಾಕ್ಡೌನ್ನಲ್ಲಿ ನಿಯಮಗಳನ್ನು ಸಡಲಿಕೆ ಮಾಡಿ, ಮೇ.31ರವರೆಗೂ ಪ್ರತೀ ಭಾನುವಾರ ಜನತಾ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸರ್ಜಾರ ಘೋಷಿಸಿತ್ತು. ಹಾಗಾಗಿ, ಮೆಡಿಕಲ್ ಸ್ಟೋರ್, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಬಿಟ್ಟರೆ ಬೇರೆಲ್ಲಾ ವ್ಯಾಪಾರ-ವಹಿವಾಟುಗಳಿಂದು ಸಂಪೂರ್ಣವಾಗಿ ಬಂದ್ ಆಗಿದೆ. ವಾಹನ ಸಂಚಾರ ಕೂಡಾ ಸಂಪೂರ್ಣ ಸ್ಥಗಿತಗೊಂಡಿದ್ದು, ತುರ್ತು ಅನಿವಾರ್ಯ ಇರುವವರು ಮಾತ್ರ ರಸ್ತೆಗೆ ಇಳಿಯಲು ಸರ್ಕಾರ ಅನುಮತಿ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಕೂಡಾ ಸಂಪೂರ್ಣ ಬಂದ್ ಆಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ. ಪರಿಣಾಮ, ಖಾಲಿ ರಸ್ತೆಗಳಲ್ಲಿ ಬಿಡಾಡಿ ದನಗಳ ದರ್ಬಾರ್ ಜೋರಾಗಿಯೇ ಇದೆ. ರಸ್ತೆಗಳು ಖಾಲಿ ಇರುವ ಕಾರಣ ಬಿಡಾಡಿ ದನಗಳು ತಮ್ಮಿಚ್ಚೆಯಂತೆ ರಸ್ತೆ ಮಧ್ಯದಲ್ಲೇ ಒಡಾಡ್ತಿವೆ. ಮೆಟ್ರೋ ಸ್ಟೇಷನ್ ಪಿಲ್ಲರ್ಗಳ ಕೆಳಗೆ ನೆರಳು ಇರುವ ಕಾರಣ ಬಿಡಾಡಿ ದನಗಳು ನೆಮ್ಮದಿಯಾಗಿ ನಿದ್ದೆಗೆ ಜಾರಿವೆ.