ಬೆಂಗಳೂರು:ಲಾಕೌಡೌನ್ ವೇಳೆ ಅನಗತ್ಯ ಓಡಾಟ ಮಾಡಿ ಜಪ್ತಿಯಾಗಿದ್ದ ವಾಹನಗಳನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಲಾಕೌಡೌನ್ ವೇಳೆ ಜಪ್ತಿಯಾದ ವಾಹನ ಮಾಲೀಕರಿಗೆ ಪೊಲೀಸ್ ಆಯುಕ್ತರಿಂದ ಸಿಹಿಸುದ್ದಿ - ಲಾಕೌಡೌನ್ ವೇಳೆ ಜಪ್ತಿಯಾದ ವಾಹನ
ಲಾಕೌಡೌನ್ ವೇಳೆ ಜಪ್ತಿಯಾದ ವಾಹನಗಳನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಟ್ವೀಟ್ ಮಾಡಿದ್ದಾರೆ.
ಸಿಎಂ ಹಾಗೂ ಗೃಹ ಸಚಿವರ ಸೂಚನೆ ಮೇರೆಗೆ ವಾಹನಗಳನ್ನು ವಾಪಸ್ ನೀಡಲು ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾರೆ. ಇದೇ ಮೇ. 1 ರಿಂದ ಸೀಜ್ ಆಗಿರುವ ವೆಹಿಕಲ್‌ಗಳನ್ನು ಆಯಾ ಠಾಣಾ ಪೊಲೀಸರು ವಾಹನಗಳ ಮಾಲೀಕರಿಗೆ ಹಿಂದಿರುಗಿಸಲಿದ್ದಾರೆ. ಈ ಲಾಕ್ಡೌನ್ ನಗರದಲ್ಲಿ ಇಲ್ಲಿಯವರೆಗೆ 48,674 ಹೆಚ್ಚು ವಾಹನ ಜಪ್ತಿಯಾಗಿತ್ತು. ಆದರೆ ನೀಡುವ ಮೊದಲು ವಾಹನಗಳ ಡಾಕ್ಯೂಮೆಂಟ್ಸ್ ಪರಿಶೀಲಿಸಲಿದ್ದಾರೆ. ಇದಕ್ಕೆ ಬೇಕಾದ ಪೇಪರ್ ವರ್ಕ್ ಹಾಗೆ ನ್ಯಾಯಾಲಯದ ಪ್ರೊಸೆಸ್ ಏನಿದೆ ಅದನ್ನ ಈಗಾಗ್ಲೇ ಮಾಡಿದ್ದಾರೆ. ಅಗತ್ಯ ಡಾಕ್ಯುಮೆಂಟ್ ಇರುವವರ ಜಪ್ತಿಯಾದ ವಾಹನ ಮಾಲಿಕರ ಕೈ ಸೇರಲಿದೆ.
ನಗರದಲ್ಲಿ ಕೊರೊನಾ ಸೋಂಕು ಹಿನ್ನೆಲೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಆದರೆ ಅಗತ್ಯ ಹಾಗೂ ತುರ್ತು ಓಡಾಟಕ್ಕೆ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲವರು ಪಾಸ್ ಇಲ್ಲದೇ ಅನಗತ್ಯವಾಗಿ ಓಡಾಟ ಮಾಡಿದ್ದರಿಂದ ಆಯಾ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಠಾಣಾ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ಹಾಕಿ ವಾಹನ ಜಪ್ತಿ ಮಾಡಲಾಗಿತ್ತು.