ಕರ್ನಾಟಕ

karnataka

ETV Bharat / state

ಲಾಕ್ ಡೌನ್​ಗೆ ಸಹಕಾರ: ಬೆಂಗಳೂರು ಜನತೆಗೆ ಧನ್ಯವಾದ ಅರ್ಪಿಸಿದ ಭಾಸ್ಕರ್ ರಾವ್ - ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಲೆಟೆಸ್ಟ್​ ನ್ಯೂಸ್​

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸರ್ಕಾರ ಇಡೀ ರಾಜ್ಯವನ್ನು 36 ಗಂಟೆಗಳ ಕಾಲ ಲಾಕ್ ಡೌನ್ ಮಾಡಿ 144ಸೆಕ್ಷನ್ ಜಾರಿ ‌ಮಾಡಿತ್ತು. ಹಾಗೆ ಬೆಂಗಳೂರು ಕೂಡ ಸಂಪೂರ್ಣ ಸ್ತಬ್ಧವಾಗಿತ್ತು. ಹಾಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮೂಲಕ‌ ಬೆಂಗಳೂರು ಜನತೆಗೆ ಧನ್ಯವಾದ ತಿಳಿಸಿದ್ದಾರೆ.

Bhaskar Rao
ಬೆಂಗಳೂರು ಜನತೆಗೆ ಧನ್ಯವಾದ ಅರ್ಪಿಸಿದ ಭಾಸ್ಕರ್ ರಾವ್

By

Published : Jul 6, 2020, 9:04 AM IST

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸರ್ಕಾರ ಇಡೀ ರಾಜ್ಯವನ್ನು 36 ಗಂಟೆಗಳ ಕಾಲ ಲಾಕ್ ಡೌನ್ ಮಾಡಿ 144ಸೆಕ್ಷನ್ ಜಾರಿ ‌ಮಾಡಿತ್ತು. ಹಾಗೆ ಸಿಲಿಕಾನ್ ಸಿಟಿ‌ ಕೂಡ ಸಂಪೂರ್ಣ ಸ್ತಬ್ಧವಾಗಿತ್ತು. ಕಳೆದ ಶನಿವಾರ ರಾತ್ರಿ 8ಗಂಟೆಯಿಂದ ಇಂದು ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಯಾರೂ ಹೊರಗಡೆ ಬರದಂತೆ ಪೊಲೀಸರು ನೋಡಿಕೊಂಡಿದ್ದರು.

ಸದ್ಯ‌ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಈ ಕುರಿತು ಟ್ವೀಟ್ ಮೂಲಕ‌ ಬೆಂಗಳೂರು ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಲಾಕ್ ಡೌನ್ ಇರುವ ಸಂದರ್ಭದಲ್ಲಿ 36 ಗಂಟೆಗಳ ಕಾಲ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದೀರಾ. ಹೀಗಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದ. ಕೊರೊನಾ ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿದೆ.‌ ಹೀಗಾಗಿ‌ ಇನ್ನು ಮುಂದೆ ನಮಗೆ ನಾವೇ ಜಾಗೃತೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಹಾಗೆ ಕೊರೊನಾ ಸೋಂಕನ್ನು ಹೊಡೆದೋಡಿಸಲು ಮಾಸ್ಕ್ ಧರಿಸಿ, ದೈಹಿಕ ‌ಅಂತರ ಕಾಯ್ದುಕೊಳ್ಳಿ‌. ಹಾಗೆ ಏನೇ ಸಮಸ್ಯೆಯಾದರೂ ನಮ್ಮ 100ಗೆ ಕರೆ ಮಾಡಿ. ತಕ್ಷಣ ಹೊಯ್ಸಳ ಸ್ಪಂದಿಸುವಂತೆ ತಿಳಿಸಿದ್ದೇನೆ ಎಂದಿದ್ದಾರೆ.

ABOUT THE AUTHOR

...view details