ಬೆಂಗಳೂರು: ಜೆ ಜೆ ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಮೇಲೆ ಆಪ್ ಮುಖಂಡ ಭಾಸ್ಕರ್ ರಾವ್ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಭಾಸ್ಕರ್ ರಾವ್ ಟ್ವೀಟ್ಗೆ ಬಿಜೆಪಿ ನಾಯಕರು ಸಹ ಮರು ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ.
ಜವಾಬ್ದಾರಿಯುತವಾದ ಪೊಲೀಸ್ ಸಂಸ್ಥೆಯ ಆಯುಕ್ತರನ್ನು ಆಡಳಿತ ಪಕ್ಷದ ಹಿರಿಯ ನಾಯಕರು 'ಸುಳ್ಳು ಹೇಳುತ್ತಾರೆ' ಎಂದಿರುವುದು ಸರ್ಕಾರ, ಮುಖ್ಯಮಂತ್ರಿಗಳನ್ನು ಅಪಮಾನಿಸಿದಂತೆ. ಆಡಳಿತರೂಢ ಪಕ್ಷ ತನ್ನ ಹಿರಿಯ ನಾಯಕರಿಗೆ ತಿಳಿ ಹೇಳುತ್ತದೆ ಎಂದು ಸಾರ್ವಜನಿಕರ ಅಪೇಕ್ಷೆಯಾಗಿದೆ ಎಂದು ಬರೆದುಕೊಂಡಿದ್ದಾರೆ.