ಕರ್ನಾಟಕ

karnataka

ETV Bharat / state

ಅಯೋಧ್ಯೆ ತೀರ್ಪು : ಬೆಂಗಳೂರಲ್ಲಿ ಇಂದು ಮದ್ಯ ಬಂದ್, 144 ಸೆಕ್ಷನ್ ಜಾರಿ

ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ‌ ಇಂದು ಬೆಳಗ್ಗೆ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಇಂದು ನಗರದಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಹಾಗೂ ಮದ್ಯವನ್ನು ನಿಷೇಧಸಿ 144 ಸೆಕ್ಷನ್​ ಜಾರಿಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ‌.

Bhaskar rao press meet

By

Published : Nov 9, 2019, 12:57 AM IST

Updated : Nov 9, 2019, 1:57 AM IST

ಬೆಂಗಳೂರು:ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ‌ ಇಂದು ಬೆಳಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿರುವ ಬೆನ್ನಲ್ಲೇ ರಾಜ್ಯದೆಲ್ಲೆಡೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ‌.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಮೊದಲಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ 50 ಕೆಎಸ್ಆರ್ ತುಕಡಿಗಳು, 20 ಸಿಆರ್ ಪಡೆಗಳು, ಒಂದು ಸಿಆರ್​ಎಫ್​ ಪಡೆ, 12 ಡಿಸಿಪಿಗಳು, 24 ಎಸಿಪಿಗಳು ಸೇರಿ‌ ಒಟ್ಟು 8 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ತೀರ್ಪು ಯಾವ ರೀತಿಯಾದರೂ ಬರಲಿ. ಸಂಭ್ರಮಾಚರಣೆ ಹಾಗೂ ಪ್ರತಿಭಟನೆ ನಿಷೇಧಿಸಲಾಗಿದೆ.‌ ಇಂದು ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೆ 144 ಸೆಕ್ಷನ್ ವಿಧಿಸಲಾಗಿದೆ‌. ಹೀಗಾಗಿ ಸಂಭ್ರಮಾಚರಣೆ ಅಥವಾ ಪ್ರತಿಭಟನೆ, ಮೆರವಣಿಗೆ, ಪಟಾಕಿ ಸಿಡಿಸುವುದು ಹಾಗೂ ಘೋಷಣೆ ಕೂಗಲು ಅವಕಾಶವಿಲ್ಲ. ಅಲ್ಲದೆ ತ್ರಿಬಲ್ ರೈಡಿಂಗ್ ಅನ್ನೂ ನಿಷೇಧ ಮಾಡಲಾಗಿದೆ.

ಅಂತಾರಾಷ್ಟ್ರೀಯ ವಿಮಾನ ಹೊರತುಪಡಿಸಿ ಎಲ್ಲ ಕಡೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಬೆಳಗ್ಗೆ 6ರಿಂದ ರಾತ್ರಿ ಭಾನುವಾರ ಮುಂಜಾನೆ 6 ಗಂಟೆಯವರೆಗೂ ಮದ್ಯ ಮಾರಾಟ ಬಂದ್ ಮಾಡಲಾಗಿದೆ. 7 ಗಂಟೆಯಿಂದಲೇ ನಗರದೆಲ್ಲೆಡೆ ಭದ್ರತೆ ಕೈಗೊಳ್ಳಲು ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಚೋದನಕಾರಿ ಹಾಗೂ ಆಕ್ಷೇಪಾರ್ಹ ಹೇಳಿಕೆ ದಾಖಲಾಗುವ ಸೋಷಿಯಲ್ ಮೀಡಿಯಾ ಬಗ್ಗೆ ನಿಗಾ ಇಡಲು ಪ್ರತ್ಯೇಕ ಡಿಸಿಪಿಯನ್ನು ನಿಯೋಜಿಸಲಾಗಿದೆ.

ಬಹುಸಂಖ್ಯಾತರ ಹಾಗೂ ಅಲ್ಪಸಂಖ್ಯಾತರ ನಾಯಕರ ಜೊತೆ ಸಭೆ ನಡೆಸಲಾಗಿದೆ. ಎಲ್ಲರಿಗೂ ಮನವಿ ಮಾಡಿಕೊಳ್ಳಲಾಗಿದೆ. ಏನೇ ತೀರ್ಪು ಬಂದರೂ ಗೌರವದಿಂದ ಸ್ವೀಕರಿಸುತ್ತೇವೆ ಎಂದಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವುದಿಲ್ಲ ಎಂದು ಅಭಯ ನೀಡಿದ್ದಾರೆ. ಇನ್ನೂ ಹಣೆಗೆ ಪಟ್ಟಿ ಕಟ್ಟಿಕೊಂಡು ಹೋಗುವುದು, ಧ್ವಜ ಒಯ್ಯುವುದು ನಿಷೇಧಿಸಲಾಗಿದೆ. ಅಂತಹವರು ಕಂಡು ಬಂದರೆ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಡಿಸಿಪಿಗಳು ರಾತ್ರಿಯಿಂದಲೇ ನಾಳೆ ರಾತ್ರಿಯವರೆಗೂ ಗಸ್ತು ತಿರುಗಲಿದ್ದಾರೆ ಎಂದರು‌.

ಅಮರ್ ಕುಮಾರ್ ಪಾಂಡೆ ಮಾತನಾಡಿ ಪ್ರತಿ ಜಿಲ್ಲೆಯ ಎಸ್ಪಿಗಳಿಗೂ ತೀರ್ಪು ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ರಾಜ್ಯದೆಲ್ಲೆಡೆ 170 ಕೆಎಸ್​ಆರ್​ಪಿ ಪಡೆ, ಎರಡು ಪ್ಯಾರಾ ಮಿಲಿಟರಿ ಪೋರ್ಸ್ ಸೇರಿದಂತೆ ರಾಜ್ಯದ ಎಲ್ಲಾ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

Last Updated : Nov 9, 2019, 1:57 AM IST

ABOUT THE AUTHOR

...view details