ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡ ಆರೋಪಿಗಳನ್ನು ಸೆರೆ ಹಿಡಿದಾಗ ಮೊದಲು ಠಾಣೆಗೆ ಕರೆದೊಯ್ಯದೆ ನೇರವಾಗಿ ಕೊರೊನಾ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.
ನಗರದಲ್ಲಿ ದಿನೇ ದಿನೆ ಪೊಲೀಸರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಅನ್ಲಾಕ್ ಬಳಿಕ ಕಳೆದ 15 ದಿನಗಳ ಅಂತರದಲ್ಲಿ 36 ಪೊಲೀಸರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಈ ಪೈಕಿ ಆರು ಮಂದಿ ಡಿಸ್ಚಾರ್ಚ್ ಆಗಿದ್ದರೆ, ವಿವಿಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್ಐ ಮೃತಪಟ್ಟಿರುವುದು ವಿಷಾದನೀಯ. ಸೋಂಕು ಕಾಣಿಸಿಕೊಂಡ ಸಿಬ್ಬಂದಿಗೆ ಉತ್ತಮ ಆಸ್ಪತ್ರೆಯಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ. ಅಪರಾಧ ಪತ್ತೆ ಜೊತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದನ್ನು ಮರೆಯದಿರಿ. ಧೈರ್ಯವಾಗಿ ಕೆಲಸ ಮಾಡಿ, ನಿಮ್ಮೊಂದಿಗೆ ಸದಾ ಪೊಲೀಸ್ ಇಲಾಖೆ ಇರಲಿದೆ ಎಂದು ಪೊಲೀಸರಲ್ಲಿ ಆತ್ಮಸ್ಥೈರ್ಯ ತುಂಬಿದರು.