ಬೆಂಗಳೂರು: ಇನ್ಮುಂದೆ ಸಿಲಿಕಾನ್ ಸಿಟಿ ಜನ ನೇರವಾಗಿ ಪೊಲೀಸ್ ಆಯುಕ್ತರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು!.. ಹೌದು. ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಮ್ಮ ಫೇಸ್ಬುಕ್ ಅಧಿಕೃತ ಪೇಜ್ ನಲ್ಲಿ ಜನರಿಗೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.
ಪೊಲೀಸರ ನೆರವು ಬೇಕೇ? ಠಾಣೆವರೆಗೆ ಹೋಗಲು ಆಗದಿದ್ರೆ ಫೇಸ್ಬುಕ್ ಮೂಲಕ ದೂರು ನೀಡಿ - Facebook official page
ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಮ್ಮ ಫೇಸ್ಬುಕ್ ಅಧಿಕೃತ ಪೇಜ್ ನಲ್ಲಿ ಜನರಿಗೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.
ಭಾಸ್ಕರ್ ರಾವ್
ಬೆಂಗಳೂರಿನ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಲೇ ಇದೆ. ಕೆಲವೊಮ್ಮೆ ಸಾರ್ವಜನಿಕರು ಪೊಲೀಸರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಮೂಲಕ ಜನ ನನ್ನ ಬಳಿ ಸಮಸ್ಯೆ ಹೇಳಿಕೊಳ್ಳಬಹುದು. ಇನ್ನು ಮುಂದೆ ಪೊಲೀಸ್ ಸೇವೆ ಬಗ್ಗೆ ಹಾಗೂ ಕುಂದು ಕೊರತೆ ಬಗ್ಗೆ ಸಹ ಇಲ್ಲಿ ಹಂಚಿಕೊಳ್ಳಬಹುದು. ನಾನು ಇನ್ನು ಮುಂದೆ ನನ್ನ ಅಧಿಕೃತ ಪೇಜ್ ನಲ್ಲಿ ಆ್ಯಕ್ಟಿವ್ ಇರಲಿದ್ದೇನೆ. ಸಮಾಜಕ್ಕೆ ಸರಿಯಾದ ಸೇವೆ ಕೊಡುವತ್ತ ನಾನು ಗಮನ ಹರಿಸುತ್ತೇನೆ ಎಂದು ವಿಡಿಯೋ ಮಾಡಿ ಆಯುಕ್ತರು ಪೋಸ್ಟ್ ಮಾಡಿದ್ದಾರೆ.