ಕರ್ನಾಟಕ

karnataka

ETV Bharat / state

ಸ್ವಿಗ್ಗಿ ಮ್ಯಾನೇಜ್ಮೆಂಟ್ ಮೇಲೆ ಗರಂ ಆದ ಭಾಸ್ಕರ್ ರಾವ್: ಕಾರಣ? - Swiggy

ಪಿಜ್ಜಾ ಡೆಲಿವರಿ ಮಾಡುವ ಉದ್ದೇಶದಿಂದ ಡೆಲಿವರಿ ಬಾಯ್ಸ್ ಟ್ರಾಫಿಕ್​ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಟ್ವೀಟ್​ ಮೂಳಕ ಕಿಡಿಕಾರಿದ್ದಾರೆ.

bhaskar-rao-angry-on-swiggy-management
bhaskar-rao-angry-on-swiggy-management

By

Published : Jan 21, 2020, 9:25 PM IST

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್, ಪಿಜ್ಜಾ ಡೆಲಿವರಿ ವ್ಯವಸ್ಥೆಯ ವಿರುದ್ಧ ಹರಿಹಾಯ್ದಿದ್ದಾರೆ. ಬೇಗ ಪಿಜ್ಜಾ ಡೆಲಿವರಿ ಮಾಡುವ ಉದ್ದೇಶದಿಂದ ಡೆಲಿವರಿ ಬಾಯ್ಸ್​ ರಸ್ತೆ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಟ್ವೀಟ್​ರನಲ್ಲಿ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಟ್ವೀಟ್

ಆರ್ಡರ್ ಮಾಡಿದ 30 ನಿಮಿಷದ ಒಳಗಾಗಿ‌ ಪಿಜ್ಜಾ ನಿಮ್ಮ ಮನೆಗೆ ತಲುಪಿಸುತ್ತೇವೆ. ಒಂದು ವೇಳೆ 30 ನಿಮಿಷ ಮೀರಿದ್ರೆ ಆ ಪಿಜ್ಜಾ ಫ್ರೀ ಅನ್ನೋ ಆಫರ್​​ ನೀಡ್ತಾರೆ. ನಿರ್ದಿಷ್ಟ ಸಮಯದೊಳಗೆ ಡೆಲಿವರಿ ತಲುಪಿಸಬೇಕು ಅನ್ನೋ ಕಂಪನಿಯ ಒತ್ತಡದಿಂದ ಡೆಲಿವರಿ ಬಾಯ್ಸ್​​ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸುತ್ತಿದ್ದಾರೆ‌. ಹೀಗಾಗಿ ಈ ಟೈಮ್​ ಅನ್ನು 40 ನಿಮಿಷಕ್ಕೆ ಕಂಪನಿ ಹೆಚ್ಚಿಸಬೇಕು ಎಂದು ಭಾಸ್ಕರ್​ ರಾವ್​ ಟ್ವಿಟ್ಟರ್​ ಮೂಲಕ ಸೂಚಿಸಿದ್ದಾರೆ.

ಸ್ವಿಗ್ಗಿ ರಿಟ್ವೀಟ್​

ಈ ಟ್ವೀಟ್ ನೋಡಿದ ಸ್ವಿಗ್ಗಿ ಕಂಪನಿ, ನಮ್ಮ ಡೆಲಿವರಿ ಬಾಯ್ಸ್​ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡ್ತಿಲ್ಲ, ಹಾಗೇನಾದ್ರು ಕಂಡುಬಂದರೆ ನಮ್ಮ ಗಮನಕ್ಕೆ ತನ್ನಿ ಎಂದಿದೆ. ಇದಕ್ಕೆ ಗರಂ ಆಗಿರುವ ಭಾಸ್ಕರ್​ ರಾವ್​ ಅವರು ಹೆಚ್ಚು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತೀರಿ. ಹಾಗಿದ್ದೂ ಕಾನೂನು ಪಾಲನೆ ಮಾಡ್ತಿದ್ದೇವೆ ಅಂತಿರಾ. ಒಂದು ವೇಳೆ ಡೆಲಿವರಿ ಬಾಯ್ಸ್​​ಗೆ ಅಪಘಾತವಾದರೆ ನೀವೇ ಹೊಣೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ABOUT THE AUTHOR

...view details