ಬೆಂಗಳೂರು : ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ಬಿಟಿಎಂ ನಾಲ್ಕನೇ ಹಂತದಲ್ಲಿರುವ ಭಾರತ್ ಪೆಟ್ರೋಲಿಯಂನ ನ್ಯಾಷನಲ್ ಸರ್ವಿಸ್ ಸೆಂಟರ್ನಲ್ಲಿ ಹೊಸ ತಂತ್ರಜ್ಞಾನವನ್ನು ಜನರಿಗೆ ಪರಿಚಯಿಸಲಾಗಿದೆ.
ಬಿಪಿಸಿಎಲ್ ಈ ಕೆಳಗಿನ ಸುಧಾರಿತ ಉತ್ಪನ್ನಗಳನ್ನು ಪ್ರಾರಂಭಿಸಿದೆ. ತಾಂತ್ರಿಕ ಮತ್ತು ಡಿಜಿಟಲ್ ಉಪಕ್ರಮಗಳು ಒದಗಿಸುವುದರ ಜೊತೆಗೆ ಪೆಟ್ರೋಲ್ ಸ್ಟೇಷನ್ನಲ್ಲಿ ಗ್ರಾಹಕರಿಗೆ ಆಗುವಂತಹ ಅನುಭವಗಳು ಒಳ್ಳೆಯ ರೀತಿ ಇರಬೇಕು. ಹೆಚ್ಚಿನ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಳ್ಳೆಯ ಕಾರ್ಯ ಯೋಜನೆಗಳನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಬಿಪಿಸಿಎಲ್ ಮಾಡಿತು.