ಬೆಂಗಳೂರು : ಡಿಸೆಂಬರ್ 8ರಂದು ಭಾರತ್ ಬಂದ್ಗೆ ಕರೆ ನೀಡಿರುವ ಹಿನ್ನೆಲೆ, ರೈತರ ಐಕ್ಯ ಹೋರಾಟ ಸಮಿತಿ ಇಂದಿನಿಂದ ನಗರದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದೆ. ರಾಜ್ಯದ ಪ್ರತೀ ಹಳ್ಳಿಯಲ್ಲೂ ಮಂಗಳವಾರ ಪ್ರತಿಭಟನೆ ನಡೆಯಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಆದರೆ, ರೈತ ಸಂಘಟನೆಗಳನ್ನು ಹೊರತುಪಡಿಸಿ, ಇತರೆ ಸಂಘಟನೆಗಳು ರೈತರ ಹೋರಾಟಕ್ಕೆ ನೈತಿಕ ಬೆಂಬಲ ಮಾತ್ರ ನೀಡಿದ್ದು, ಇಂದು ಕಚೇರಿ, ಅಂಗಡಿ-ಮುಂಗಟ್ಟು, ಹೋಟೆಲ್ ಬಂದ್ ಮಾಡದಿರಲು ನಿರ್ಧರಿಸಿವೆ. ಉಳಿದಂತೆ ಮಾರುಕಟ್ಟೆಗಳು, ಬೀದಿಬದಿ ವ್ಯಾಪಾರ, ಲಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ವಿವಿಧ ರಾಜಕೀಯ ಪಕ್ಷಗಳಿಂದ ಪ್ರತಿಭಟನೆಗಳೂ ನಡೆಯಲಿವೆ.
ಭಾರತ್ ಬಂದ್... ಯಾರು ಏನಂದ್ರು? ಏನೇನು ಲಭ್ಯವಿರಲ್ಲ :
ಮಾರುಕಟ್ಟೆಗಳು ಬಂದ್ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತರಕಾರಿ, ಹೂವು -ಹಣ್ಣು ಮಾರಾಟ ಮಾಡುವ ಮಾರುಕಟ್ಟೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ, ಶಿವಾಜಿನಗರ, ಕಲಾಸಿಪಾಳ್ಯ ಹಾಗೂ ಕೆ.ಆರ್. ಮಾರುಕಟ್ಟೆಯ ವ್ಯಾಪಾರಿಗಳು ಬಂದ್ಗೆ ಬೆಂಬಲ ನೀಡಿದ್ದು, ಕೆಲ ವ್ಯಾಪಾರಿಗಳು ಮಾತ್ರ ಕೆ.ಆರ್. ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲಿದ್ದಾರೆ.
ಬೀದಿ ಬದಿ ವ್ಯಾಪಾರ ಇಲ್ಲ :ಇಂದು ನಗರದಾದ್ಯಂತ ಇರುವ ಬೀದಿ ಬದಿ ವ್ಯಾಪಾರಗಳು ಸ್ಥಗಿತಗೊಳ್ಳಲಿವೆ ಎಂದು ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.
ಲಾರಿಗಳು ಓಡಾಡಲ್ಲ :ಸಂಪೂರ್ಣವಾಗಿ ದಕ್ಷಿಣ ಭಾರತದ ಲಾರಿ ಸಂಘಟನೆಗಳಿಂದ ರೈತರಿಗೆ ಬೆಂಬಲ ಸಿಕ್ಕಿದ್ದು, ಇಂದು ದಕ್ಷಿಣ ಭಾರತದ 26 ಲಕ್ಷ ವಾಹನಗಳನ್ನು ರಸ್ತೆಗಳಿಸದಿರಲು ನಿರ್ಧರಿಸಲಾಗಿದೆ.
ಓಲಾ-ಊಬರ್ ಬಂದ್ -ಚಾಲಕರ ಇಚ್ಛೆ :ಓಲಾ -ಊಬರ್ ಟ್ಯಾಕ್ಸಿ ಸಂಘಟನೆಯಿಂದ ರೈತರ ಬಂದ್ಗೆ ಬೆಂಬಲ ಘೋಷಿಸಲಾಗಿದೆ. ಆದರೆ, ವಾಹನಗಳನ್ನು ರಸ್ತೆಗಿಳಿಸಬೇಕಾ, ಬೇಡವಾ ಎಂಬ ನಿರ್ಧಾರವನ್ನು ಚಾಲಕರಿಗೆ ಬಿಡಲಾಗಿದೆ ಎಂದು ಸಂಘದ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ.
ಕನ್ನಡಪರ ಸಂಘಟನೆ- ವಾಟಾಳ್ ಬಣ :ವಾಟಾಳ್ ನಾಗರಾಜ್ ಬಣ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಬಂದ್ಗೆ ಬೆಂಬಲ ಘೋಷಿಸಿವೆ.
ಆನ್ ಲೈನ್ ಕ್ಲಾಸ್ ಬಂದ್ :ರೈತರ ಪ್ರತಿಭಟನೆಗೆ ಬೆಂಬಲ ನೀಡಿ, ಖಾಸಗಿ ಶಾಲೆಗಳು ಒಂದು ದಿನದ ಆನ್ಲೈನ್ ತರಗತಿಗಳನ್ನು ಸ್ಥಗಿತಗೊಳಿಸಲಿವೆ.
ರೈತ ಸಂಘಟನೆಗಳು :ಬಂದ್ನಲ್ಲಿ ರೈತ ಸಂಘಟನೆಗಳು ವ್ಯಾಪಕವಾಗಿ ಭಾಗಿಯಾಗಲಿವೆ. ರಾಜ್ಯ ರೈತ ಸಂಘಟನೆ, ರಾಜ್ಯ ರೈತ ಐಕ್ಯ ಹೋರಾಟ ಸಮಿತಿ, ರಾಜ್ಯ ಕಬ್ಬು ಬೆಳೆಗಾರರ ಸಂಘಟನೆ, ಹಸಿರು ಸೇನೆ, ಪುಟ್ಟಣ್ಣಯ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಂಗನವಾಡಿ ಕಾರ್ಯಕರ್ತರ ಸಂಘ ಬಂದ್ಗೆ ಬೆಂಬಲ ನೀಡಿವೆ.
ಏನೇನು ಲಭ್ಯವಿರಲಿದೆ :ಆಟೋ, ಬಿಎಂಟಿಸಿ, ಕೆಎಸ್ಆರ್ಟಿಸಿ, ಮೆಟ್ರೋ, ಹೋಟೆಲ್, ಬಾರ್ , ರೆಸ್ಟೋರೆಂಟ್, ಸರ್ಕಾರಿ ಕಚೇರಿಗಳು, ಬ್ಯಾಂಕ್, ಪೆಟ್ರೋಲ್, ಡೀಸೆಲ್, ದಿನಸಿ, ಹಾಲು, ಪೇಪರ್, ಮೆಡಿಕಲ್, ಆಸ್ಪತ್ರೆ, ಆ್ಯಂಬುಲೆನ್ಸ್ ಮತ್ತು ಕೆಲವೆಡೆ ಎಪಿಎಂಸಿ ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.