ಬೆಂಗಳೂರು:ಹೊಸ ವಿದ್ಯುತ್ ಸಂಪರ್ಕ ನೋಂದಣಿ ಜನ ಸ್ನೇಹಿ ವಿದ್ಯುತ್ ಸೇವೆಗಳು ಸೇರಿದಂತೆ ಹಲವು ವಿದ್ಯುತ್ ಸೇವೆಗಾಗಿ ರೂಪಿಸಲಾಗಿರುವ ಆರ್‌ಎಪಿಡಿಆರ್‌ಪಿ ತಂತ್ರಾಂಶದಲ್ಲಿ ನ್ಯೂನತೆ ಕಂಡು ಬಂದ ಹಿನ್ನೆಲೆಯಲ್ಲಿ ಸರಿಪಡಿಸಲಾಗಿದೆ. ರಾಜ್ಯದ 5 ಎಸ್ಕಾಂಗಳ ಗ್ರಾಹಕರಿಗೆ 24 ಗಂಟೆಯೂ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಬೆಸ್ಕಾಂ ತಿಳಿಸಿದೆ.
ಜುಲೈ 2022 ರಲ್ಲಿ ಹಾರ್ಡ್‌ವೇರ್‌ದಲ್ಲಿ ಕಂಡು ಬಂದಿದ್ದ ದೋಷದಿಂದಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಾಫ್ಟ್ವೇರ್ ನಿರ್ವಹಣೆಗೆ ಅಡಚಣೆವುಂಟಾಗಿತ್ತು. ಈ ಸಂದರ್ಭದಲ್ಲಿ ಗ್ರಾಹಕರು ವೆಬ್ ಪೋರ್ಟ್ ಲ್ ಗೆ ಲಾಗಿನ್ ಆಗಲು, ಬೆಸ್ಕಾಂ ವ್ಯಾಪ್ತಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1.30 ರ ವರೆಗೆ ಮತ್ತು ಇತರ ಎಸ್ಕಾಂಗಳಿಗೆ ಮಧ್ಯಾಹ್ನ 1.30 ರಿಂದ ಸಂಜೆ 7ರವರೆಗೆ ಸಮಯ ನಿಗದಿ ಪಡಿಸಲಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಆರ್‌ಎಪಿಡಿಆರ್‌ಪಿ ವೆಬ್ ಸಿದ್ಧ:ಕೆಲವು ಹೆಚ್ಚುವರಿ ಸರ್ವರ್ಗಳು ಮತ್ತು ತಂತ್ರಾಂಶಗಳ ಉನ್ನತೀಕರಣದೊಂದಿಗೆ 24 ಗಂಟೆಗಳ ನಿರಂತರ ಸೇವೆಗೆ ಆರ್‌ಎಪಿಡಿಆರ್‌ಪಿ ವೆಬ್ ಅಪ್ಲಿಕೇಷನ್ ಅನ್ನು ಸಿದ್ದಪಡಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.